ಹರಿಹರ; ನಗರದ ಹೊರವಲಯದ ಗುತ್ತೂರು ವಿದ್ಯುತ್ ಗ್ರಿಡ್ ಸಮೀಪದ ಹರಿಹರ - ಹರಪನಹಳ್ಳಿ ರಸ್ತೆಯಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ.
ಹಿಂಬದಿಯಿಂದ ಬೈಕ್ಗೆ ಡಿಕ್ಕಿ ಹೊಡೆದ ಲಾರಿ: ಯುವಕ ಸಾವು - ದಾವಣಗೆರೆ ಅಪಘಾತದಲ್ಲಿ ಯುವಕ ಸಾವು,
ಹಿಂಬದಿಯಿಂದ ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹೊಟ್ಟೆಗೆನಹಳ್ಳಿಯ ಗ್ರಾಮದ ವಿಜಯ (25) ತಂದೆ ಮಂಜುನಾಥ್ ಹಾಗೂ ಪರಶುರಾಮ ಎಂಬುವವರು ಹರಿಹರ ನಗರಕ್ಕೆ ವಿದ್ಯುತ್ ಉಪಕರಣಗಳನ್ನು ಖರೀದಿಸಿ ವಾಪಸಾಗುತ್ತಿದ್ದರು. ಸ್ವ-ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿರುವಾಗ ಹಿಂಬದಿಯಿಂದ ಲಾರಿ ಗುದ್ದಿದೆ. ಪರಿಣಾಮ ವಿಜಯ ನೆಲಕ್ಕುರಳಿ ತೆಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಬೈಕ್ ಸವಾರ ಪರಶುರಾಮ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ಐ ರವಿಕುಮಾರ್ ಡಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.