ದಾವಣಗೆರೆ:ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಚುಡಾಯಿಸುತ್ತಿದ್ದ ಯುವಕನಿಗೆ ಸಾರ್ವಜನಿಕರೇ ಹಿಡಿದು ಸರಿಯಾಗಿ ಪಾಠ ಕಲಿಸಿರುವ ಘಟನೆ ನಗರದಲ್ಲಿ ನಡೆದಿದೆ.
ದಾವಣಗೆರೆಯಲ್ಲಿ ಯುವತಿ ಚುಡಾಯಿಸಿದವನಿಗೆ ಗ್ರಹಚಾರ ಬಿಡಿಸಿದ ಜನ - ಜಯದೇವ ಸರ್ಕಲ್ ಅಂಗಡಿ
ಯುವಕನೋರ್ವ ದಾವಣಗೆರೆ ನಗರದ ಜಯದೇವ ಸರ್ಕಲ್ ಅಂಗಡಿ ಒಂದರಲ್ಲಿ ಕೆಲಸ ಮಾಡುವ ಯುವತಿಯನ್ನು ಪ್ರತಿನಿತ್ಯ ಚುಡಾಯಿಸುತ್ತಿದ್ದ. ಇದರಿಂದ ಕೆರಳಿದ ಯುವತಿಯ ಪೋಷಕರು ಹಾಗೂ ಸ್ಥಳೀಯರು ಪುಂಡನಿಗೆ ಧರ್ಮದೇಟು ನೀಡಿದ್ದಾರೆ.
ದಾವಣಗೆರೆಯಲ್ಲಿ ಯುವತಿಯನ್ನು ಚುಡಾಯಿಸಿದ್ದಕ್ಕೆ ಸಿಕ್ಕಿತು ಧರ್ಮದೇಟು
ಯುವಕನೋರ್ವ ನಗರದ ಜಯದೇವ ಸರ್ಕಲ್‌ನಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಯುವತಿವೋರ್ವಳಿಗೆ ಪ್ರತಿನಿತ್ಯ ಚುಡಾಯಿಸುತ್ತಿದ್ದ. ಇದನ್ನ ಗಮನಿಸಿದ ಆಕೆಯ ಪೋಷಕರು ಕೆಂಡಾಮಂಡಲವಾಗಿದ್ದರು. ಜೊತೆಗೆ ಸ್ಥಳೀಯರು ಸಹ ಇಂತಹ ಘಟನೆಯಿಂದ ಸಿಡಿಮಿಡಿಗೊಂಡು ಪುಂಡಾಟ ಮೆರೆದವನಿಗೆರಸ್ತೆ ಪಕ್ಕದಲ್ಲಿ ನಿಲ್ಲಿಸಿಧರ್ಮದೇಟು ನೀಡಿದ್ದಾರೆ.
ಅಷ್ಟೇ ಅಲ್ಲದೇ, ಆತನನ್ನು ಯುವತಿಯ ಬಳಿ ಎಳೆದೊಯ್ದು ಕಾಲಿಗೆ ಬೀಳಿಸಲು ಪ್ರಯತ್ನಿಸಿದ್ದಾರೆ. ಸದ್ಯ ಯುವಕನನ್ನು ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.