ದಾವಣಗೆರೆ:ತಾಲೂಕಿನ ಕಕ್ಕರಗೊಳ್ಳ-ಕಡ್ಲೆಬಾಳು ರಸ್ತೆ ಕುಸಿದಿದ್ದ ಪರಿಣಾಮ ಅದೇ ಮಾರ್ಗದಲ್ಲಿ ಲಾರಿಯೊಂದು ಸಂಚರಿಸುವಾಗ ಅದರೊಳಗೆ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.
ಮಳೆ ಹೊಡೆತಕ್ಕೆ ರಸ್ತೆಗಳು ಕುಸಿದಿರ್ತವೆ ಹುಷಾರು,, ಇಲ್ನೋಡಿ ಈ ಲಾರಿ ಸ್ಥಿತಿ.. - ಕಕ್ಕರಗೊಳ್ಳ - ಕಡ್ಲೆಬಾಳು ರಸ್ತೆ ಕುಸಿತ
ಕಕ್ಕರಗೊಳ್ಳ-ಕಡ್ಲೆಬಾಳು ರಸ್ತೆಯಲ್ಲಿನ ಮಣ್ಣು ಕುಸಿದ ಪರಿಣಾಮ ಲಾರಿಯೊಂದು ಕುಸಿದ ರಸ್ತೆಯೊಳಗೆ ಸಿಲುಕಿಕೊಂಡಿದೆ.
ಲಾರಿ
ಕಳೆದ ಎರಡು ದಿನಗಳಿಂದ ಮಳೆಯಾಗಿದ್ದು, ರಸ್ತೆಯಲ್ಲಿನ ಮಣ್ಣು ಕುಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಳಿಕ ಗುಂಡಿಯಲ್ಲಿ ಬಿದ್ದಿದ್ದ ಲಾರಿಯನ್ನು ಮೇಲಕ್ಕೆತ್ತಲಾಗಿದೆ. ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Last Updated : Oct 22, 2019, 8:57 PM IST