ದಾವಣಗೆರೆ: ಸಿಇಟಿ ರ‍್ಯಾಂಕ್ ಕಡಿಮೆ ಬಂದಿದೆ ಎಂದು ಖಿನ್ನತೆಗೆ ಒಳಗಾದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಮುಸ್ಲಿಂ ಕಾಲೋನಿಯಲ್ಲಿ ನಡೆದಿದೆ.
ಸಿಇಟಿಯಲ್ಲಿ ಕಡಿಮೆ ರ‍್ಯಾಂಕ್: ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು! - ಸಿಇಟಿಯಲ್ಲಿ ಕಡಿಮೆ ರ‍್ಯಾಂಕ್
ಸಿಇಟಿಯಲ್ಲಿ ಕಡಿಮೆ ರ‍್ಯಾಂಕ್ ಬಂದ ಕಾರಣ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಚೈತ್ರಾ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪಿಯುಸಿ ನಂತರ ಮೆಡಿಕಲ್ ಓದಬೇಕು ಎಂಬ ಆಸೆಯಿಂದ ಚೈತ್ರ ಕಠಿಣ ಅಭ್ಯಾಸ ಮಾಡಿ ಸಿಇಟಿ ಪರೀಕ್ಷೆ ಬರೆದಿದ್ದರು. ಆದರೇ, ಸಿಇಟಿಯಲ್ಲಿ ಕಡಿಮೆ ರ‍್ಯಾಂಕ್ ಬಂದ ಕಾರಣ ಮೆಡಿಕಲ್ ಸೀಟ್ ತಪ್ಪಿದ್ದರಿಂದ ಖಿನ್ನತೆಗೆ ಒಳಗಾದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಜಗಳೂರು ಠಾಣೆ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:SSLCಯಲ್ಲಿ C+ .. ವಿದ್ಯಾರ್ಥಿ ದಿಲ್ ಖುಷ್, ಮಳೆಯಲ್ಲೇ ಮಸ್ತ್ ಡ್ಯಾನ್ಸ್