ದಾವಣಗೆರೆ : ಟೊಮೆಟೊಗೆ ಚಿನ್ನದ ಬೆಲೆ ಸಿಕ್ಕಿದ್ದರಿಂದ ರೈತರು ಹೆಚ್ಚಿನ ಲಾಭ ಪಡೆಯುತ್ತಿದ್ದು, ಕೆಂಪು ಸುಂದರಿ ಬೆಳೆಯಲು ಮುಂದಾಗಿದ್ದಾರೆ. ಕೆಲ ರೈತರು ಕೋಟಿಗಟ್ಟಲೇ ಲಾಭ ಪಡೆದರೆ ಇನ್ನೂ ಕೆಲವರು ಲಕ್ಷಗಟ್ಟಲೇ ಆದಾಯ ಗಳಿಸಿದ್ದಾರೆ. ಈ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದ ರೈತರೊಬ್ಬರು ಸೇರಿದ್ದಾರೆ. ಕೇವಲ ಮೂವತ್ತು ಗುಂಟೆ ಜಮೀನಿನಲ್ಲಿ 7 ಲಕ್ಷ ರೂ. ಲಾಭ ಪಡೆದಿದ್ದು, ಇನ್ನೂ ಮೂರು ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಹೌದು, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರಿನ ಯುವ ರೈತ ವಿಜಯ್ ಗಂಟೇರ್ ಅವರು ತಮ್ಮ ಮೂವತ್ತು ಗುಂಟೆ ಜಮೀನಿನಲ್ಲಿ ಟೊಮೆಟೊ ಬೆಳೆದು ಲಕ್ಷಾಧೀಶ ಆಗಿದ್ದಾರೆ. ಕಳೆದ ಮೂರು ವರ್ಷಗಳಿಂದ ವಿಜಯ್ ಟೊಮೆಟೊ ಬೆಳೆಯುತ್ತಿದ್ದು, ಈ ವರ್ಷ ಮಾತ್ರ ಬೆಳೆ ಕೈ ಹಿಡಿದಿದೆ. ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ಯುವ ರೈತ ವಿಜಯ್, ಎಂಎ ಪದವೀಧರರಾಗಿದ್ದು ಎಲ್ಲೂ ಕೆಲಸ ಸಿಗದೇ ಕೃಷಿಯತ್ತ ಮುಖ ಮಾಡಿ ಟೊಮೆಟೊ ಬೆಳೆದು ಲಾಭ ಗಳಿಸಿದ್ದಾರೆ.
ಒಟ್ಟು ಎಂಟು ಎಕರೆ ಜಮೀನಿನಲ್ಲಿ ಐದು ಎಕರೆ ಭತ್ತ ಬೆಳೆಯುತ್ತಿದ್ದು, ಎರಡು ಎಕರೆಯಲ್ಲಿ ಅಡಿಕೆ ತೋಟ, ಉಳಿದ 01 ಎಕರೆಯಲ್ಲಿ ಇರಲು ಮನೆ ನಿರ್ಮಾಣ ಮಾಡಿಕೊಂಡು ಮೂವತ್ತು ಗುಂಟೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದಾರೆ. ಪ್ರಸ್ತುತ, ಟೊಮೆಟೊ ಬೆಲೆ ಗಗನಕ್ಕೇರಿಕೆಯಾಗಿದ್ದರಿಂದ ಕೇವಲ 30 ಗುಂಟೆಯಲ್ಲಿ ಬೆಳೆದ ಟೊಮೆಟೊ ಈವರೆಗೆ 7 ಲಕ್ಷ ರೂ. ಆದಾಯ ತಂದುಕೊಟ್ಟಿದೆ.
ಇದನ್ನೂ ಓದಿ :Tomato price : ಟೊಮೆಟೊ ಬೆಳೆದು ಕೋಟ್ಯಾಧಿಪತಿಯಾದ ರೈತ.. ಅದೃಷ್ಟ ಅಂದ್ರೆ ಇದು...