ದಾವಣಗೆರೆ:ಸಾಲಬಾಧೆ ಹಿನ್ನೆಲೆಯಲ್ಲಿ ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಚಿಕ್ಕತೊಗಲೇರಿ ಗ್ರಾಮದಲ್ಲಿ ನಡೆದಿದೆ.
ಸಾಲಬಾಧೆಯಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ರೈತ - ಆತ್ಮಹತ್ಯೆಗೆ ಯತ್ನಿಸಿದ ರೈತ
ಬೆಳೆ ನಷ್ಟ, ಲಾಕ್ಡೌನ್ನಿಂದಾಗಿ ನಿಗದಿತ ಬೆಲೆ ದೊರೆಯದ ಹಿನ್ನೆಲೆ ಕೈತುಂಬಾ ಸಾಲ ಮಾಡಿಕೊಂಡಿದ್ದ ರೈತನೊಬ್ಬ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತ
ಕೃಷ್ಣಮೂರ್ತಿ (48) ಆತ್ಮಹತ್ಯೆಗೆ ಯತ್ನಿಸಿದ ರೈತ. ಬ್ಯಾಂಕ್ ಸೇರಿದಂತೆ ಇತರ ಸಹಕಾರಿ ಸಂಘಗಳಲ್ಲಿ13 ಲಕ್ಷ ರೂಪಾಯಿಯಷ್ಟು ಸಾಲ ಮಾಡಿಕೊಂಡಿದ್ದು, ಬೆಳೆ ನಷ್ಟ ಅನುಭವಿಸಿದ್ದರು. ಅದಲ್ಲದೇ ಲಾಕ್ಡೌನ್ನಿಂದಾಗಿ ಬೆಳೆದ ಸ್ವಲ್ಪ ಬೆಳೆಗೂ ಸರಿಯಾದ ದರವೂ ಸಿಕ್ಕಿರಲಿಲ್ಲ. ಇದರಿಂದ ಮನನೊಂದ ಕೃಷ್ಣಮೂರ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ರೈತ ಕೃಷ್ಣಮೂರ್ತಿಗೆ ಸದ್ಯ ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.