ಕರ್ನಾಟಕ

karnataka

ETV Bharat / state

ಅದೃಷ್ಟದ ಬಾಗಿಲು ತೆರೆದ ಅಂಚೆ ಮತ: ಅಚ್ಚರಿಯ ಗೆಲುವು ಅಂದ್ರೆ ಇದು!

ಅಂಚೆ ಮತವೊಂದು ಅಭ್ಯರ್ಥಿಯ ಅದೃಷ್ಟವನ್ನು ಬದಲಿಸಿದೆ. 413 ಮತಗಳನ್ನು ಪಡೆಯುವ ಮೂಲಕ ಇಬ್ಬರು ಅಭ್ಯರ್ಥಿಗಳು ಸಮಬಲ ಸಾಧಿಸಿದ್ದರು. ಆದರೆ ಕೊನೆಯಲ್ಲಿ ಬಂದ ಅಂಚೆ ಮತವೊಂದು ಓರ್ವ ಅಭ್ಯರ್ಥಿಯನ್ನು ಗೆಲುವಿನ ದಡ ಸೇರಿಸಿದೆ.

A candidate won by a single postal vote
ಸಂಗ್ರಹ ಚಿತ್ರ

By

Published : Dec 30, 2020, 9:32 PM IST

Updated : Dec 30, 2020, 9:47 PM IST

ದಾವಣಗೆರೆ: ಸೋಲಿನ ಭೀತಿಯಲ್ಲಿದ್ದ ಅಭ್ಯರ್ಥಿಯೊಬ್ಬನಿಗೆ ಒಂದು ಮತ ಕೈ ಹಿಡಿದಿದೆ. ಕೊನೆಯಲ್ಲಿ ಬಂದ ಬಂದ ಒಂದೇ ಒಂದು ಅಂಚೆ ಮತವು ಆತನನ್ನು ಗೆಲುವಿನ ದಡಕ್ಕೆ ಮುಟ್ಟಿಸಿದೆ. ಇಂದಿನ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದಲ್ಲಿ ಇದು ಒಂದು ಅಚ್ಚರಿಯ ಗೆಲವು ಎಂದರೆ ತಪ್ಪಾಗಲಾರದು.

ಮತ ಎಣಿಕೆ ಮುಕ್ತಾಯದ ಹಂತದಲ್ಲಿ ಇಬ್ಬರು ಅಭ್ಯರ್ಥಿಗಳು ಸಮಬಲ ಸಾಧಿಸಿದ್ದರು. ಆದರೆ, ಬಳಿಕ ಬಂದ ಒಂದು ಅಂಚೆ ಮತವು ಹರಿಹರ ತಾಲೂಕಿನ ಹೊಳೆಸಿರಿಗೆರೆ ಗ್ರಾಮ ಪಂಚಾಯಿತಿ ಅಭ್ಯರ್ಥಿ ವಿನಾಯಕ ಮಾಳಗಿಮನಿ ಎಂಬಾತನನ್ನು ಗೆಲ್ಲುವಂತೆ ಮಾಡಿದೆ. ಸೋಲುವ ಹಂತದಲ್ಲಿದ್ದ ವಿನಾಯಕ ಈ ಮತದಿಂದ ಗೆಲುವಿನ ನಗೆ ಬೀರಿದ್ದಾರೆ.

ಇದನ್ನೂ ಓದಿ : ಸತತ ಆರನೇ ಬಾರಿ ಆಯ್ಕೆಯಾದ ಅಭ್ಯರ್ಥಿ!

ಹೊಳೆಸಿರಿಗೆರೆ ಗ್ರಾಮ ಪಂಚಾಯಿತಿಯ 4ನೇ ವಾರ್ಡ್ ಸಾಮಾನ್ಯ ಮೀಸಲು ಸ್ಥಾನಕ್ಕೆ ವಿನಾಯಕ ಮಾಳಗಿಮನಿ ಸ್ಪರ್ಧೆ ಮಾಡಿದ್ದರು. ವಿನಾಯಕ ಮಾಳಗಿಮನಿ 414 ಮತ ಪಡೆದಿದ್ದು, ಪ್ರತಿಸ್ಪರ್ಧಿ ಕೆ.ಜಿ.ಸದಾಶಿವಪ್ಪ 413 ಮತಗಳನ್ನು ಪಡೆದು ಸೋಲು ಕಂಡರು.

Last Updated : Dec 30, 2020, 9:47 PM IST

ABOUT THE AUTHOR

...view details