ದಾವಣಗೆರೆ: ನಗರದ ನಿಟ್ಟುವಳ್ಳಿಯಲ್ಲಿ ಬೃಹದಾಕಾರದ ಮರ ಬಿದ್ದಿದ್ದು, ಶಾಲಾ ಮಕ್ಕಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಧರೆಗುರುಳಿದ ಮರ... ಅದೃಷ್ಟವಶಾತ್ ಶಾಲಾ ಮಕ್ಕಳು ಪಾರು - undefined
ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಸುಮಾರು 10 ವರ್ಷದ ಹಳೆಯ ಮರ ಧರೆಗುರುಳಿದೆ
![ಧರೆಗುರುಳಿದ ಮರ... ಅದೃಷ್ಟವಶಾತ್ ಶಾಲಾ ಮಕ್ಕಳು ಪಾರು](https://etvbharatimages.akamaized.net/etvbharat/prod-images/768-512-4060219-thumbnail-3x2-mj.jpg)
ಧರೆಗುರುಳಿದ ಬೃಹದಾಕಾರದ ಮರ
ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಸುಮಾರು 10 ವರ್ಷದ ಹಳೆಯ ಮರ ಧರೆಗುರುಳಿದೆ. ಸಂಜೆ ಶಾಲೆ ಮುಗಿದ ಬಳಿಕ ಮಕ್ಕಳು ಇದೇ ಮಾರ್ಗವಾಗಿ ಮನೆಗೆ ಹೋಗಬೇಕು. ಮಕ್ಕಳೆಲ್ಲ ಹೋದ ಸ್ವಲ್ಪ ಸಮಯದಲ್ಲೇ ಮರ ಕೆಳಗುರುಳಿದೆ.
ಧರೆಗುರುಳಿದ ಮರ
ಮರದ ರೆಂಬೆ ಕೊಂಬೆಗಳು ರಸ್ತೆ ಮೇಲೆ ಬಿದ್ದಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸಾವಿರಾರು ಮಂದಿ ಈ ಮಾರ್ಗದಲ್ಲಿ ನಿತ್ಯವೂ ಓಡಾಡುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ಮರ ಉರುಳಿದರೂ ಸ್ಥಳಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಬಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.