ದಾವಣಗೆರೆ:ಜಿಲ್ಲೆಯಲ್ಲಿ ನಿನ್ನೆ 94 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 20, 672ಕ್ಕೆ ಏರಿದೆ. 63 ವರ್ಷದ ಚನ್ನಗಿರಿ ತಾಲೂಕಿನ ವೃದ್ಧ ಬಲಿಯಾಗಿದ್ದು, ಇದುವರೆಗೆ 256 ಮಂದಿ ಮೃತಪಟ್ಟಿದ್ದಾರೆ.
ದಾವಣಗೆರೆಯಲ್ಲಿ 94 ಕೊರೊನಾ ಕೇಸ್ ಪತ್ತೆ: ಸೋಂಕಿಗೆ ವೃದ್ಧ ಬಲಿ - Davangere Corona infected people
57 ಜನರು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ 19,622 ಜನರು ಡಿಸ್ಚಾರ್ಜ್ ಆಗಿದ್ದಾರೆ.
ದಾವಣಗೆರೆಯಲ್ಲಿ 94 ಕೊರೊನಾ ಪಾಸಿಟಿವ್: ಸೋಂಕಿಗೆ ವೃದ್ಧ ಬಲಿ
ಜಿಲ್ಲೆಯ ದಾವಣಗೆರೆ ತಾಲೂಕಿನಲ್ಲಿ 39, ಹರಿಹರದಲ್ಲಿ 21, ಜಗಳೂರಿನಲ್ಲಿ 7, ಚನ್ನಗಿರಿಯಲ್ಲಿ 11, ಹೊನ್ನಾಳಿಯಲ್ಲಿ 15 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ ಒಬ್ಬರಲ್ಲಿ ಸೋಂಕಿರುವುದು ಖಚಿತವಾಗಿದೆ.
57 ಜನರು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ 19,622 ಜನರು ಡಿಸ್ಚಾರ್ಜ್ ಆಗಿದ್ದಾರೆ. 794 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 1,124 ಮಂದಿಯ ಗಂಟಲು ದ್ರವದ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.