ದಾವಣಗೆರೆ :ಆಟವಾಡುವಾಗ ಕುಸಿದು ಬಿದ್ದ ಮಗುವೊಂದು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ನಿಹಾರಿಕಾ ಎಂಬ 9 ವರ್ಷದಬಾಲಕಿ ಮೃತಪಟ್ಟಿದ್ದಾಳೆ.
ಮನೆಯಂಗಳದಲ್ಲಿ ಆಟವಾಡುವಾಗ ಕುಸಿದು ಬಿದ್ದು ಬಾಲಕಿ ಸಾವು - ಆಟವಾಡುವಾಗ ಕುಸಿದು ಬಿದ್ದು ಮಗು ಸಾವು
ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ನಿಹಾರಿಕಾ ಕಳೆದವಾರವಷ್ಟೇ ತೀವ್ರ ಜ್ವರದಿಂದ ಬಳಲುತಿದ್ದಳು ಎಂದು ಪೋಷಕರು ವೈದ್ಯರಿಗೆ ತಿಳಿಸಿದ್ದಾರೆ. ಜಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ..
![ಮನೆಯಂಗಳದಲ್ಲಿ ಆಟವಾಡುವಾಗ ಕುಸಿದು ಬಿದ್ದು ಬಾಲಕಿ ಸಾವು 9-year-girl-died-when-she-playing-outside-house](https://etvbharatimages.akamaized.net/etvbharat/prod-images/768-512-12798180-thumbnail-3x2-asasdfasf.jpg)
ಗೊಲ್ಲರಹಟ್ಟಿ ಗ್ರಾಮದ ನಿವಾಸಿಯಾದ ಶಶಿ ಎಂಬುವರ ಪುತ್ರಿ ನಿಹಾರಿಕಾ, ಎಂದಿನಂತೆ ಇಂದು ಕೂಡ ಮನೆಯಂಗಳದಲ್ಲಿ ಆಟವಾಡುತಿದ್ದಳು. ಆದರೆ, ಇದ್ದಕ್ಕಿದ್ದಂತೆ ಕುಸಿದು ಬಿದ್ದಳು. ಕುಸಿದು ಬಿದ್ದ ಬಾಲಕಿಯನ್ನು ನೋಡಿದ ಪೋಷಕರು, ಗಾಬರಿಗೊಂಡು ಜಗಳೂರು ತಾಲೂಕು ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದ್ರೇ, ಅಷ್ಟರಾಗಲೇ ನಿಹಾರಿಕಾ ಮೃತಟ್ಟಿದ್ದಳು.
ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ನಿಹಾರಿಕಾ ಕಳೆದವಾರವಷ್ಟೇ ತೀವ್ರ ಜ್ವರದಿಂದ ಬಳಲುತಿದ್ದಳು ಎಂದು ಪೋಷಕರು ವೈದ್ಯರಿಗೆ ತಿಳಿಸಿದ್ದಾರೆ. ಜಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಬಾಲಕಿ ಸಾವಿಗೆ ನಿಖರ ಕಾರಣ ತಿಳಿಯಲಿದೆ.