ಕರ್ನಾಟಕ

karnataka

ETV Bharat / state

ಹಿಜಾಬ್​ ವಿವಾದ: ಹರಿಹರ ಕಾಲೇಜಿನಲ್ಲಿ ಗಲಾಟೆ ಮಾಡಿದವರ ಬಂಧನ - ದಾವಣಗೆರೆಯಲ್ಲಿ ಹಿಜಾಬ್​ ವಿವಾದ

ಹರಿಹರ ಕಾಲೇಜಿನಲ್ಲಿ ಗಲಾಟೆ ಮಾಡಿದವರನ್ನು ದಾವಣಗೆರೆ ಪೊಲೀಸರು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

accused arrest over hijab row in Davanagere, Davanagere hijab row, Davanagere Crime news, ದಾವಣಗೆರೆಯಲ್ಲಿ ಹಿಜಾಬ್​ ವಿವಾದ ಹಿನ್ನೆಲೆ ಆರೋಪಿಗಳ ಬಂಧನ, ದಾವಣಗೆರೆಯಲ್ಲಿ ಹಿಜಾಬ್​ ವಿವಾದ, ದಾವಣಗೆರೆ ಅಪರಾಧ ಸುದ್ದಿ,
ಹರಿಹರ ಕಾಲೇಜಿನಲ್ಲಿ ಗಲಾಟೆ ಮಾಡಿದವರ ಹೆಡೆಮುರಿ ಕಟ್ಟಿದ ದಾವಣಗೆರೆ ಪೋಲಿಸರು

By

Published : Feb 10, 2022, 2:15 PM IST

ದಾವಣಗೆರೆ:ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ದಾವಣಗೆರೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ವಿವಾದದಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಕೆಲವರು ಕಾಲೇಜಿನ‌ ಆವರಣದಲ್ಲಿ ಆತಂಕ ಸೃಷ್ಟಿಸಿದ್ದು ಇದೀಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವಿದ್ಯಾರ್ಥಿಗಳನ್ನು ಹೊರತುಪಡಿಸಿ ಕೆಲವರು ಕಾಲೇಜಿನ‌ ಆವರಣದಲ್ಲಿ ವಿದ್ಯಾರ್ಥಿನಿಯರನ್ನು ಹಿಡಿದು ಎಳೆದಾಡಿದ್ದಾರೆ ಎಂದು ಆರೋಪಿಸಿ ಒಂದು ಕೋಮಿನ‌ ಯುವಕರು ಕಾಲೇಜಿನ ಆವರಣದಲ್ಲಿ ಜಮಾಯಿಸಿ ಪ್ರತಿಭಟನೆ ಮಾಡಿದ್ದರು. ಈ ಪ್ರತಿಭಟನೆ, ವಾಗ್ವಾದದಿಂದ ಗಲಾಟೆಗೆ ತಿರುಗಿದ ಪರಿಣಾಮ ಪೊಲೀಸರು ಹರಿಹರ ನಗರದ ಜೆ.ಸಿ.ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ‌ ಆವಣದಲ್ಲಿ ಲಾಠಿ ಪ್ರಹಾರ ಮಾಡಿ, ಆಶ್ರುವಾಯು ಸಿಡಿಸಿದ್ದರು. ಇದೀಗ ಈ ಗಲಾಟೆಗೆ ಸಂಬಂಧಿಸಿದಂತೆ ಹರಿಹರ ನಗರ ಠಾಣೆಯ ಪೊಲೀಸರು ಎರಡೂ ಕೋಮಿಗೆ ಸೇರಿದ ಐವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ಕಾಲೇಜು ವಿದ್ಯಾರ್ಥಿಗಳ ಸಂಬಂಧಿಗಳು ಎಂದು ತಿಳಿದುಬಂದಿದೆ.


ಇದನ್ನೂ ಓದಿ:ರಾಯಚೂರಲ್ಲಿ ಕಸದ ರಾಶಿಯಲ್ಲಿ ಸಿಕ್ತು ನಿವೃತ್ತ ಎಎಸ್​ಐ ಮೃತದೇಹ: ಮಗನೇ ಹಂತಕ!

ಮಲೇಬೆನ್ನೂರಿನಲ್ಲಿ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು:ಇನ್ನುಮಲೇಬೆನ್ನೂರಿನಲ್ಲಿ ನಡೆದ ಸ್ಕ್ರೂ ಡ್ರೈವರ್ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 4 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details