ದಾವಣಗೆರೆ: ಜಿಲ್ಲೆಯಲ್ಲಿ 100 ವರ್ಷದ ವೃದ್ಧ ಸೇರಿ 79 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1334ರಷ್ಟಾಗಿದೆ.
ದಾವಣಗೆರೆ; 100 ವರ್ಷದ ವೃದ್ಧ ಸೇರಿ 79 ಮಂದಿಗೆ ಸೋಂಕು ದೃಢ - ದಾವಣಗೆರೆ ಲೆಟೆಸ್ಟ್ ನ್ಯೂಸ್
79 ಮಂದಿಗೆ ಕೊರೊನಾ ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 1334ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು 810 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ದಾವಣಗೆರೆ ನಗರದ ಎಸ್ ಎಸ್ ಲೇಔಟ್ ನ 100 ವರ್ಷದ ವೃದ್ಧ ಸೇರಿದಂತೆ ಒಟ್ಟು 13 ವೃದ್ಧರಲ್ಲಿ ಸೋಂಕು ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ. ದಾವಣಗೆರೆಯಲ್ಲಿ 46, ಹರಿಹರದಲ್ಲಿ 22, ಜಗಳೂರಿನಲ್ಲಿ 1, ಚನ್ನಗಿರಿಯಲ್ಲಿ 3, ಹೊನ್ನಾಳಿಯಲ್ಲಿ 6, ಅಂತರ್ ಜಿಲ್ಲಾ ಪ್ರಯಾಣ ಮಾಡಿದ್ದ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇಂದು 59 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 810 ಮಂದಿ ಕೊರೊನಾ ಗೆದ್ದು ಮನೆ ಸೇರಿದ್ದಾರೆ. ಸದ್ಯ 491 ಸಕ್ರಿಯ ಪ್ರಕರಣಗಳಿಗೆ ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.