ದಾವಣಗೆರೆ: ಜಿಲ್ಲೆಯಲ್ಲಿ ಇಂದು ಏಳು ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 345ಕ್ಕೆ ಏರಿದೆ. ಇಬ್ಬರು ವೃದ್ಧೆಯರು, ಇಬ್ಬರು ಯುವತಿಯರು, ಓರ್ವ ವೃದ್ಧ ಹಾಗೂ ಇಬ್ಬರು ಯುವಕರಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.
ದಾವಣಗೆರೆಯಲ್ಲಿ ಇಂದು 7 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 345ಕ್ಕೆ ಏರಿಕೆ - ದಾವಣಗೆರೆ ಕೊರೊನಾ ವೈರಸ್ ನ್ಯೂಸ್
ದಾವಣಗೆರೆಯಲ್ಲಿ ನಾಲ್ಕು, ಚನ್ನಗಿರಿ, ಹೊನ್ನಾಳಿ, ಹರಿಹರದಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 345ಕ್ಕೆ ಏರಿಕೆಯಾಗಿದೆ. ಇಂದು 9 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ದಾವಣಗೆರೆಯಲ್ಲಿ ನಾಲ್ಕು, ಚನ್ನಗಿರಿ, ಹೊನ್ನಾಳಿ, ಹರಿಹರದಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ. ಬೆಳಗಾವಿಯಿಂದ ಬಂದಿದ್ದ 22 ವರ್ಷದ ಯುವಕ ಹಾಗೂ ದೆಹಲಿಯಿಂದ ಬಂದಿರುವ 23 ವರ್ಷದ ಯುವಕನಿಗೆ ಸೋಂಕು ತಗುಲಿದೆ. ಪಿ-10385 ಸೋಂಕಿತರಿಂದ 22 ವರ್ಷದ ಯುವತಿಗೆ, ಐಎಲ್ಐನಿಂದ ಬಳಲುತ್ತಿದ್ದ 73 ವರ್ಷದ ಓರ್ವ ವೃದ್ಧ, 63 ಮತ್ತು 60 ವರ್ಷದ ಇಬ್ಬರು ವೃದ್ಧೆಯರು ಹಾಗೂ 22 ವರ್ಷದ ಯುವತಿಗೆ ಕೋವಿಡ್ ತಗುಲಿದೆ.
ಇಂದು 9 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಕೊರೊನಾದಿಂದ ಒಟ್ಟು 294 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 9 ಮಂದಿ ಮೃತಪಟ್ಟಿದ್ದು, 42 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.