ದಾವಣಗೆರೆ: ಜಿಲ್ಲೆಯಲ್ಲಿಂದು 7 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದಾವಣಗೆರೆಯಲ್ಲಿಂದು 7 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ - Davanagere corona news
ದಾವಣಗೆರೆಯಲ್ಲಿಂದು ಏಳು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 282 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 227 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ.
ರೋಗಿ- 1385 23 ವರ್ಷದ ಯುವಕ, ರೋಗಿ- 1386 59 ವರ್ಷದ ಪುರುಷ, ರೋಗಿ-1387 34 ವರ್ಷದ ಪುರುಷ ಈ ಮೂವರು ಕೆಮ್ಮು, ಶೀತ, ಜ್ವರದಿಂದ (ಐಎಲ್‍ಐ) ಬಳಲುತ್ತಿದ್ದರು. ರೋಗಿ-1388 48 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ರೋಗಿ-1389 15 ವರ್ಷದ ಬಾಲಕ, ರೋಗಿ -1390, 12 ವರ್ಷದ ಬಾಲಕ ಇವರಿಬ್ಬರು, ರೋಗಿ- 8492 ರ ಸಂಪರ್ಕ ಹೊಂದಿದ್ದರು.
ಒಟ್ಟು 282 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 227 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 07 ಸಾವು ಸಂಭವಿಸಿದ್ದು ಪ್ರಸ್ತುತ 48 ಸಕ್ರಿಯ ಪ್ರಕರಣಗಳಿವೆ. 513 ಸ್ಯಾಂಪಲ್ಗಳು ನೆಗೆಟಿವ್ ಬಂದಿದ್ದು, ಇಂದು 754 ಗಂಟಲು ದ್ರವ ಪರೀಕ್ಷೆಗೆ ಸಂಗ್ರಹಿಸಲಾಗಿದ್ದು, ಒಟ್ಟು 2286 ಜನರ ಸ್ಯಾಂಪಲ್ಗಳ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ತಿಳಿಸಿದ್ದಾರೆ.