ಕರ್ನಾಟಕ

karnataka

ETV Bharat / state

ಜ. 10ರಿಂದ ಮುರುಘರಾಜೇಂದ್ರ ಶ್ರೀಗಳ 63ನೇ ಸ್ಮರಣೋತ್ಸವ... ಶ್ರೀ ಜಯದೇವ ಪ್ರಶಸ್ತಿಗೆ ರೇವಣ್ಣ ಆಯ್ಕೆ - ದಾವಣಗೆರೆ ಸುದ್ದಿ

ಮುರುಘರಾಜೇಂದ್ರ ಮಹಾಸ್ವಾಮಿಗಳ 63ನೇ ಸ್ಮರಣೋತ್ಸವ, ಜಯದೇವ ಶ್ರೀ ಹಾಗೂ ಶೂನ್ಯ ಪೀಠ ಪ್ರಶಸ್ತಿ ಪ್ರದಾನ, ಸಹಜ ಶಿವಯೋಗ ಮತ್ತು ಶರಣ ಸಂಸ್ಕೃತಿ ಉತ್ಸವ ಜನವರಿ 10ರಿಂದ 12ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

Murugha Shri
ಶಿವಮೂರ್ತಿ ಮುರುಘಾ ಶರಣ

By

Published : Jan 4, 2020, 12:30 PM IST

ದಾವಣಗೆರೆ: ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಕೊಡಮಾಡುವ ಪ್ರತಿಷ್ಠಿತ 'ಶ್ರೀ ಜಯದೇವ ಪ್ರಶಸ್ತಿ'ಯನ್ನು ಈ ಬಾರಿ ವಿಧಾನ ಪರಿಷತ್​ನ ಸದಸ್ಯ ಹೆಚ್.ಎಂ.ರೇವಣ್ಣರಿಗೆ ನೀಡಲಾಗುತ್ತಿದೆ.

ಬೆಂಗಳೂರಿನ ಉದ್ಯಮಿ ಹೆಚ್.ಸಿ.ಪ್ರಭಾಕರ್​ಗೆ 'ಶೂನ್ಯಪೀಠ ಅಲ್ಲಮ', ಹೊಳಲ್ಕೆರೆಯ ಖ್ಯಾತ ವೈದ್ಯ ಡಾ. ನಾಗರಾಜ್ ಬಿ. ಸಜ್ಜನ್​ರಿಗೆ "ಶೂನ್ಯಪೀಠದ ಚನ್ನಬಸವ', ಬೀದರ್​ನ ಅಕ್ಕ ಅನ್ನಪೂರ್ಣ ತಾಯಿ ಅವರಿಗೆ "ಶೂನ್ಯಪೀಠ ಅಕ್ಕನಾಗಮ್ಮ ಪ್ರಶಸ್ತಿ' ನೀಡಲಾಗ್ತಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 10ರಂದು ಸಂಜೆ 6.30ಕ್ಕೆ ನಗರದ ಜಯದೇವ ವೃತ್ತದಲ್ಲಿರುವ ಜಯದೇವ ಮುರುಘಾ ರಾಜೇಂದ್ರ ಮಠದಲ್ಲಿ ನಡೆಯಲಿದೆ.

ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರಿಂದ ಸುದ್ದಿಗೋಷ್ಠಿ

ಮುರುಘರಾಜೇಂದ್ರ ಮಹಾಸ್ವಾಮಿಗಳ 63ನೇ ಸ್ಮರಣೋತ್ಸವ, ಜಯದೇವ ಶ್ರೀ ಹಾಗೂ ಶೂನ್ಯಪೀಠ ಪ್ರಶಸ್ತಿ ಪ್ರದಾನ, ಸಹಜ ಶಿವಯೋಗ ಮತ್ತು ಶರಣ ಸಂಸ್ಕೃತಿ ಉತ್ಸವ ಜನವರಿ 10ರಿಂದ 12ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಮೂರು ದಿನಗಳ ಕಾಲ ವೈಚಾರಿಕ ವಿಚಾರಗಳಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯಾರ್ಥಿಗಳೊಂದಿಗೆ ಸಂವಾದ, ದೇವದಾಸಿ ಮಹಿಳೆಯರ ಜಾಗೃತಿ, ಮಹಿಳೆ, ಮಕ್ಕಳ ಸುರಕ್ಷತೆ ಮತ್ತು ಎನ್​​ಕೌಂಟರ್ ಕುರಿತ ಮಹಿಳಾ ಸಮಾವೇಶ, ರಾಜ್ಯಮಟ್ಟದ ಚದುರಂಗ ಸ್ಪರ್ಧೆ, ಅನುಭವ ಮಂಟಪ ಪರಿಕಲ್ಪನೆ ಮತ್ತು ಪೌರತ್ವ ಕಾಯ್ದೆ - ಒಂದು ಮಾಹಿತಿ ಸಭೆ ಕುರಿತ ಚಿಂತನಾ ಸಮಾವೇಶದ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ನಿತ್ಯವೂ ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಶ್ರೀಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details