ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ 60 ಡೋಸ್ ವ್ಯಾಕ್ಸಿನ್ ಮಾಯ: ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆರೋಪ - ಲಸಿಕೆ ಕಾಳಸಂತೆಯಲ್ಲಿ ಮಾರಾಟ ಆರೋಪ

ದಾವಣಗೆರೆಯ ಹೆಬ್ಬಾಳು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 60 ಡೋಸ್ ವ್ಯಾಕ್ಸಿನ್ ಕಾಣೆಯಾಗಿದ್ದು, ಜನರು ಆಸ್ಪತ್ರೆ ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

davangare
ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ

By

Published : Jul 5, 2021, 5:20 PM IST

ದಾವಣಗೆರೆ: ಸಾಕಷ್ಟು ಕಡೆಯಲ್ಲಿ ಲಸಿಕೆ ಪೂರೈಕೆ ಇಲ್ಲದೇ ಕೊರೊನಾ ಸಂಜೀವಿನಿ ವ್ಯಾಕ್ಸಿನ್​ ಅಭಾವ ಎದುರಾಗಿದೆ. ಆದ್ರೆ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಸರಬರಾಜಾಗಿದ್ದ ವ್ಯಾಕ್ಸಿನ್​ ಮಾಯವಾಗಿದೆ. ಹೀಗಾಗಿ ಹಳ್ಳಿ‌ ಜನರಿಗೆ ಸಿಗಬೇಕಾಗಿದ್ದ ವ್ಯಾಕ್ಸಿನ್​ ಕಳ್ಳಸಂತೆಯಲ್ಲಿ ಮಾರಾಟವಾಯ್ತಾ? ಎಂಬ ಅನುಮಾನ ಕಾಡತೊಡಗಿದೆ.

ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ

ದಾವಣಗೆರೆಯ ಹೆಬ್ಬಾಳು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಣೆಯಾಗಿರುವ 60 ಡೋಸ್ ವ್ಯಾಕ್ಸಿನ್ ಅನ್ನು ಆಸ್ಪತ್ರೆಯ ಸಿಬ್ಬಂದಿಯೇ ಕಳ್ಳತನ‌ ಮಾಡಿರಬಹುದು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಲಸಿಕೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಕೊರೊನಾ ಲಸಿಕೆ ನೀಡುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುಗ್ಗಿ ಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ABOUT THE AUTHOR

...view details