ಕರ್ನಾಟಕ

karnataka

ETV Bharat / state

ಪಾಲಿಕೆ ಸದಸ್ಯರ ಖಾತೆಗೆ ಲಕ್ಷ ಲಕ್ಷ ಹಣ ಜಮೆ: ಮೇಯರ್ ಸ್ಪಷ್ಟನೆ ಹೀಗಿದೆ...! - ಪಾಲಿಕೆ ಸದಸ್ಯರ ಖಾತೆಗೆ ಲಕ್ಷ ಲಕ್ಷ ಹಣ ಜಮಾ

ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರ ಅಕೌಂಟ್​​ಗೆ ಹಣ ಜಮೆಯಾಗಿದ್ದು, ಬ್ಯಾಂಕ್​​ನ ಯಡವಟ್ಟಿನಿಂದ ಪಾಲಿಕೆಯ ಮೂರು ಕೋಟಿ ಹಣ 50 ಜನ ಪಾಲಿಕೆ ಸದಸ್ಯರ ಅಕೌಂಟ್​ಗಳಿಗೆ ಸಂದಾಯವಾಗಿದೆ.

ಮೇಯರ್ ಎಸ್ ಟಿ ವಿರೇಶ್ ಸ್ಪಷ್ಟನೆ
ಮೇಯರ್ ಎಸ್ ಟಿ ವಿರೇಶ್ ಸ್ಪಷ್ಟನೆ

By

Published : Jun 5, 2021, 2:30 PM IST

ದಾವಣಗೆರೆ: ಬ್ಯಾಂಕ್ ಸಿಬ್ಬಂದಿ ಯಡವಟ್ಟಿನಿಂದ ಆರು ಸಾವಿರ ಗೌರವಧನ ಹಾಕುವ ಬದಲು 50 ಪಾಲಿಕೆ ಸದಸ್ಯರ ಅಕೌಂಟುಗಳಿಗೆ 6 ರಿಂದ 16 ಲಕ್ಷ ರೂಪಾಯಿ ಜಮಾ ಆಗಿದೆ. ಈ ವಿಚಾರ ಸಾಕಷ್ಟು ಗೊಂದಲ ಮೂಡಿಸಿದ್ದು, ಈ ಬಗ್ಗೆ ಮೇಯರ್ ಎಸ್.ಟಿ. ವೀರೇಶ ಸ್ಪಷ್ಟನೆ ನೀಡಿದ್ದಾರೆ.

ಮೇಯರ್ ಎಸ್ ಟಿ ವಿರೇಶ್ ಸ್ಪಷ್ಟನೆ

ಪಾಲಿಕೆ‌ ಸದಸ್ಯರಿಗೆ ಆರು ಸಾವಿರ ಗೌರವಧನ ನೀಡಲಾಗುತ್ತದೆ. ಆದರೆ ಬ್ಯಾಂಕ್ ಸಿಬ್ಬಂದಿಯ ತಪ್ಪಿನಿಂದ ಅಚಾತುರ್ಯ ನಡೆದಿದೆ. ಈಗಾಗಲೇ ಪಾಲಿಕೆ ಸದಸ್ಯರ ಖಾತೆಗೆ ಹಾಕಿದ್ದ ಹಣವನ್ನು ಬ್ಯಾಂಕ್ ಸಿಬ್ಬಂದಿ ಹಿಂಪಡೆದಿದ್ದು, ಕೆಲ ಪಾಲಿಕೆ ಸದಸ್ಯರ ಖಾತೆಗೆ ಹಾಕಿದ ಹಣ ಸಾಲಕ್ಕೆ ಕಟ್ ಆಗಿದ್ದು, ಅಂಥ ಸದಸ್ಯರು ಹಣ ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ ಎಂದು ಮೇಯರ್ ತಿಳಿಸಿದ್ದಾರೆ.

ಇನ್ನು ಮೇಯರ್ ಅವರ ಖಾತೆಗೂ 16 ಲಕ್ಷ ರೂಪಾಯಿ ಜಮಾ ಆಗಿದ್ದು, ಅದನ್ನು ಹಿಂದಿರುಗಿಸಿದ್ದಾರೆ.

ABOUT THE AUTHOR

...view details