ದಾವಣಗೆರೆ:ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿ 405 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 8,969 ಜನ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಇಂದು ಹೊಸದಾಗಿ 255 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ದಾವಣಗೆರೆಯಲ್ಲಿ 119, ಹರಿಹರ 28, ಜಗಳೂರು 13, ಚನ್ನಗಿರಿ 48, ಹೊನ್ನಾಳಿ 38, ಹೊರ ಜಿಲ್ಲೆಯಿಂದ ಬಂದಿದ್ದ 9 ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 11,892ಕ್ಕೆ ಏರಿಕೆಯಾಗಿದೆ.