ದಾವಣಗೆರೆ:ನಿನ್ನೆ 4 ಜನರಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದ್ದು, ಸದ್ಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದಾವಣಗೆರೆ ಜಿಲ್ಲೆಯಲ್ಲಿ ಮಹಾಮಾರಿಯಿಂದ ಐವರು ಗುಣಮುಖ - new corona case
ನಿನ್ನೆ ಜಿಲ್ಲೆಯಲ್ಲಿ 4 ಜನರಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದ್ದು, ಗುಣಮುಖರಾದ ರೋಗಿ ಸಂಖ್ಯೆ 960, 1250, 1292, 1247 ಮತ್ತು 1378ರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.
ನಿನ್ನೆ ಗುಣಮುಖರಾದ ಐವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. 2557 ರೋಗಿ ಸಂಖ್ಯೆಯ 65 ವರ್ಷದ ವೃದ್ಧೆ ಹಾಗೂ ರೋಗಿ ಸಂಖ್ಯೆ 2558ರ 68 ವರ್ಷದ ವೃದ್ಧೆಯು ರೋಗಿ ಸಂಖ್ಯೆ-2208ರ ಸಂಪರ್ಕಿತರಾಗಿದ್ದಾರೆ. 68 ವರ್ಷದ ಮಹಿಳೆ ಇನ್‍ಫ್ಲುಯೆಂಜಾ ಲೈಕ್ ಇಲ್‍ನೆಸ್ ಹಿನ್ನೆಲೆ ಹೊಂದಿದ ಪ್ರಕರಣವಾಗಿದೆ. 8 ವರ್ಷದ ಬಾಲಕ(P-2559)ನು P-992 ಇವರ ಸಂಪರ್ಕಿತರಾಗಿದ್ದಾರೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ರೋಗಿ ಸಂಖ್ಯೆ 960, 1250, 1292, 1247 ಮತ್ತು 1378ರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಜಿಲ್ಲೆಯಲ್ಲಿ ಒಟ್ಟು 146 ಪ್ರಕರಣಗಳ ಪೈಕಿ 84 ಜನರು ಬಿಡುಗಡೆ ಹೊಂದಿದ್ದು, 58 ಸಕ್ರಿಯ ಪ್ರಕರಣಗಳಿವೆ.