ದಾವಣಗೆರೆ: ಜಿಲ್ಲೆಯಲ್ಲಿ ನಿನ್ನೆ 36 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 20,518ಕ್ಕೆ ಏರಿದೆ.
ದಾವಣಗೆರೆ ಜಿಲ್ಲೆಯಲ್ಲಿ ಮತ್ತೆ 36 ಕೊರೊನಾ ಕೇಸ್ ಪತ್ತೆ - ದಾವಣಗೆರೆ ಲೇಟೆಸ್ಟ್ ಕೊರೊನಾ ಅಪ್ಡೇಟ್
ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆ 36 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ದಾವಣಗೆರೆಯಲ್ಲಿ ನಿನ್ನೆ 36 ಕೊರೊನಾ ಪಾಸಿಟಿವ್ ಕೇಸ್ ಪತ್ತೆ
ದಾವಣಗೆರೆ-16, ಹರಿಹರ-7, ಜಗಳೂರು-3, ಚನ್ನಗಿರಿ-6 ಹಾಗೂ ಹೊನ್ನಾಳಿಯಲ್ಲಿ ನಾಲ್ವರಿಗೆ ಸೋಂಕು ತಗುಲಿದೆ. ಸೋಂಕಿನಿಂದ ನಿನ್ನೆ 90 ಜನರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಈವರೆಗೆ ಒಟ್ಟು 19,475 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 789 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರೆದಿದೆ.
1,189 ಜನರ ಗಂಟಲು ದ್ರವದ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, 5,997 ವರದಿ ಬರಬೇಕಿದೆ.