ದಾವಣಗೆರೆ: ಜಿಲ್ಲೆಯಲ್ಲಿ ಅಧಿಕೃತವಾಗಿ ಆರ್ಟಿಒನಿಂದ ಪರವಾನಗಿ ಪಡೆದ ಡ್ರೈವಿಂಗ್ ಶಾಲೆಗಳಿದ್ದು, 35-40 ಚಾಲನಾ ಕಲಿಕಾ ಶಾಲೆಗಳಿವೆ. ಯಾವುದೇ ಅನಧಿಕೃತ ಡ್ರೈವಿಂಗ್ ಶಾಲೆಗಳು ಕಂಡುಬಂದಿಲ್ಲ.
ದಾವಣಗೆರೆ ಜಿಲ್ಲೆಯಲ್ಲಿರುವ ಅಧಿಕೃತ ಡ್ರೈವಿಂಗ್ ಸ್ಕೂಲ್ಗಳೆಷ್ಟು? - Davanagere district news
ದಾವಣಗೆರೆ ಜಿಲ್ಲೆಯಲ್ಲಿ ಇರುವ 35ಕ್ಕೂ ಅಧಿಕ ಡ್ರೈವಿಂಗ್ ಶಾಲೆಗಳ ಪೈಕಿ 3ರಿಂದ 4 ಮಾತ್ರ ಸರ್ಕಾರದ ನಿಯಮಗಳನ್ನು ಅಳವಡಿಸಿಕೊಂಡಿವೆ.
![ದಾವಣಗೆರೆ ಜಿಲ್ಲೆಯಲ್ಲಿರುವ ಅಧಿಕೃತ ಡ್ರೈವಿಂಗ್ ಸ್ಕೂಲ್ಗಳೆಷ್ಟು? Driving School](https://etvbharatimages.akamaized.net/etvbharat/prod-images/768-512-10441520-227-10441520-1612026250047.jpg)
ಸದ್ಯ ಇರುವ ಡ್ರೈವಿಂಗ್ ಶಾಲೆಗಳ ಪೈಕಿ 3ರಿಂದ 4 ಮಾತ್ರ ಸರ್ಕಾರದ ನಿಯಮಗಳನ್ನು ಅಳವಡಿಸಿಕೊಂಡಿವೆ. ಪ್ರತಿಯೊಂದು ಡ್ರೈವಿಂಗ್ ಶಾಲೆಗಳು ದೊಡ್ಡ ಕಟ್ಟಡದಲ್ಲಿ ಇರಬೇಕೆನ್ನುವ ನಿಯಮವಿದೆ. ಆದರೆ, ಸುಮಾರು 30ಕ್ಕೂ ಹೆಚ್ಚು ಕಲಿಕಾ ಶಾಲೆಗಳು ನಿಯಮಗಳನ್ನು ಗಾಳಿಗೆ ತೂರಿವೆ ಎಂಬುದು ತಿಳಿದು ಬಂದಿದೆ.
ಸರ್ಕಾರದ ನಿಯಮಗಳು ಯಾವುವು?:ದೊಡ್ಡ ಕಟ್ಟಡದಲ್ಲಿ ಡ್ರೈವಿಂಗ್ ಶಾಲೆ ಇರಬೇಕು. ಡ್ರೈವಿಂಗ್ ಕಲಿಸುವ ಜೊತೆ ಜೊತೆಗೆ ಥಿಯರಿ ಪಾಠ ಮಾಡಬೇಕು. ಅದಕ್ಕಾಗಿಯೇ ಒಬ್ಬರನ್ನು ನೇಮಿಸಿಕೊಳ್ಳಬೇಕು. ಕಂಪ್ಯೂಟರ್ ಆಧಾರಿತ ಪಾಠ ಕೂಡ ಮಾಡಬೇಕು. ಹೀಗೆ ಹಲವು ನಿಯಮಗಳಿವೆ. ಆದರೆ ಮೂರರಿಂದ ನಾಲ್ಕು ಹೊರತುಪಡಿಸಿದರೆ ಉಳಿದವು ಸರ್ಕಾರಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದು ತಿಳಿದು ಬಂದಿದೆ.