ದಾವಣಗೆರೆ: ಜಿಲ್ಲೆಯಲ್ಲಿ 279 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,158ಕ್ಕೇರಿದೆ.
ದಾವಣಗೆರೆ: 279 ಕೊರೊನಾ ಪಾಸಿಟಿವ್ ದೃಢ, 127 ಜನರು ಗುಣಮುಖ - Corona Positive Found at Davangere
ದಾವಣಗೆರೆ ಜಿಲ್ಲೆಯ ಇಂದಿನ ಕೊರೊನಾ ಅಂಕಿ-ಅಂಶ ಹೀಗಿದೆ.
ಕೊರೊನಾ ಪಾಸಿಟಿವ್ ದೃಢ
ದಾವಣಗೆರೆಯಲ್ಲಿ 115, ಹರಿಹರ 64, ಜಗಳೂರು 12, ಚನ್ನಗಿರಿ 36, ಹೊನ್ನಾಳಿ 48 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ ನಾಲ್ವರಲ್ಲಿ ಸೋಂಕು ಇರುವುದು ಖಚಿತವಾಗಿದೆ.
127 ಜನರು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 15, 274 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 1641 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರೆದಿದೆ. 688 ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಇನ್ನು 6,491 ಪರೀಕ್ಷಾ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಇದುವರೆಗೆ 243 ಜನರು ಕೊರೊನಾ ವೈರಾಣುವಿನಿಂದ ಮೃತಪಟ್ಟಿದ್ದಾರೆ.