ಕರ್ನಾಟಕ

karnataka

ETV Bharat / state

ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸ್ನೇಹಿತನಿಂದ ಆತ ಪೀಕಿದ್ದೆಷ್ಟು ಗೊತ್ತೇ? - ದಾವಣಗೆರೆಯಲ್ಲಿ ಸ್ನೇಹಿತನಿಂದಲೆ ವಂಚನೆ

ಅಮೆರಿಕಾ ಮೂಲದ ಎಲೆಕ್ಟ್ರಾನಿಕ್ ಉಪಕರಣ ಕಂಪನಿ ಏಜೆಂಟ್ ಆಗಿ​ ಉದ್ಯೋಗ ನೀಡುವುದಾಗಿ ನಂಬಿಸಿರುವ ಸ್ನೇಹಿತನೇ ₹ 23.56 ಲಕ್ಷ ವಂಚಿಸಿರುವ ಪ್ರಕರಣ ನಡೆದಿದೆ.

ಸ್ನೇಹಿತನಿಂದಲೇ ವಂಚನೆ ಪ್ರಕರಣ

By

Published : Oct 25, 2019, 3:04 PM IST

ದಾವಣಗೆರೆ:ಸ್ನೇಹಿತನ ಮಾತು ನಂಬಿ ಅಮೆರಿಕಾ ಮೂಲದ ಎಲೆಕ್ಟ್ರಾನಿಕ್‌ ಉಪಕರಣಗಳ ಕಂಪನಿಯ ಏಜೆಂಟ್‌ ಆಗಲು ಬಯಸಿದ ಬಿಕಾಂ ವಿದ್ಯಾರ್ಥಿ ಸುಮಾರು ₹ 23.56 ಲಕ್ಷದ ಹಣ ಕಳೆದುಕೊಂಡ ಘಟನೆ ನಡೆದಿದೆ.

ಸ್ನೇಹಿತನಿಂದಲೇ ವಂಚನೆ ಪ್ರಕರಣ

ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿ ತನ್ಮಯ್ ಆರ್.ಶೆಟ್ಟಿ ವಂಚನೆಗೊಳಗಾದ ವ್ಯಕ್ತಿ.

ಪ್ರಕರಣದ ವಿವರ:

ಅಮೆರಿಕಾ ಮೂಲದ ಕಂಪನಿಯೊಂದು ಇಂಡಿಯಾ ಮಾರ್ಟ್ ಕಂಪನಿಯ ಮೂಲಕ ಎಲೆಕ್ಟ್ರಾನಿಕ್‌ ಉತ್ಪನ್ನಗಳ ವಿತರಣೆಗೆ ವಿತರಕರನ್ನು ಹುಡುಕುತ್ತಿದೆ. ಈ ಮೊದಲು ಕಂಪನಿಯಲ್ಲಿ ನಾನು ಕೆಲಸ ಮಾಡಿ ಬಿಟ್ಟಿದ್ದೇನೆ ಎಂದು ಸ್ನೇಹಿತ ನಿಖಿಲೇಶ್ ಅಚಾರ್ಯ ತನ್ನ ಸ್ನೇಹಿತ ತನ್ಮಯ್ ಶೆಟ್ಟಿಗೆ ತಿಳಿಸಿದ್ದಾನೆ.

ನಿನಗೂ ಕೆಲಸ ಬೇಕಿದ್ದರೆ ಕಂಪನಿಯ ಏಜೆಂಟ್ ಜೊತೆ ಮಾತನಾಡಿ ಸಂಪರ್ಕಕ್ಕೆ ಫೋನ್ ನಂಬರ್ ನೀಡುತ್ತೇನೆ ಎಂದು ಹೇಳಿ ನಂಬಿಸಿದ್ದಾನೆ. ಬಳಿಕ ಅಮೆರಿಕಾದ ಸೂಕ್ ಮಾರ್ಟ್ ಕಾರ್ಪೊರೇಶನ್ ಲಿಮಿಟೆಡ್ ಕಂಪನಿಯ ಏಜೆಂಟ್ ಕರೀಂ ವಾಹಬ್ ಎಂದು ತಾನೇ ತನ್ಮಯ್​ಗೆ ಕರೆ ಮಾಡಿ, ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ಭಾರತಕ್ಕೆ ಕಳುಹಿಸುತ್ತೇವೆ. ಇವುಗಳ ವಿತರಣೆಗೆ ಏಜೆಂಟರ ಅವಶ್ಯಕತೆ ಇದೆ ಎಂದು ಆಸೆ ಹುಟ್ಟಿಸಿದ್ದಾನೆ.

ಇದೇ ವೇಳೆ, ತನ್ಮಯ್​ ಶೆಟ್ಟಿ ಬಳಿ ಹಂತ, ಹಂತವಾಗಿ ಹಣ ವಸೂಲಿ ಮಾಡಿ, ಎಲೆಕ್ಟ್ರಾನಿಕ್ ಉತ್ಪನ್ನಗಳು ತಲುಪಿದ ಮೇಲೆ ಕಟ್ಟಿದ ಎಲ್ಲಾ ಹಣವನ್ನು ವಾಪಸ್‌ ಕೊಡುವುದಾಗಿ ಏಜೆಂಟ್ ಕರೀಂ ವಾಹಬ್ ನಂಬಿಸಿದ್ದಾನೆ ಎಂದು ತನ್ಮಯ್ ದೂರಿನಲ್ಲಿ ತಿಳಿಸಿದ್ದಾನೆ.

ಈ ಬಗ್ಗೆ ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details