ಕರ್ನಾಟಕ

karnataka

ETV Bharat / state

ಮಳೆ ಅಂತಾ ಮರದ ಆಶ್ರಯ ಪಡೆದ್ರು... ಮರಕ್ಕೆ ಸಿಡಿಲು ಬಡಿದು ಇಬ್ಬರು ಸಾವು - ಗುಡುಗು ಸಿಡಿಲು ಮಳೆ

ದಾವಣಗೆರೆಯಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಇನ್ನು ಸಿಡಿಲು ಬಡಿದು ಇಬ್ಬರು ಯುವಕರು ಮೃತಪಟ್ಟಿದ್ದಾರೆ.

thunderbolt
thunderbolt

By

Published : May 5, 2021, 4:21 AM IST


ದಾವಣಗೆರೆ:ಸಿಡಿಲು ಬಡಿದು ಇಬ್ಬರು ಯುವಕರು ಸಾವನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ಹುಚ್ಚವ್ವನಹಳ್ಳಿ ಗ್ರಾಮದ ಬಳಿ ಮಂಗಳವಾರ ನಡೆದಿದೆ.

ರವಿಕುಮಾರ್(32), ರಮೇಶ್ (30) ಸಾವನ್ನಪ್ಪಿದ ದುರ್ದೈವಿಗಳು. ಮಳೆ ಬಂದಿದ್ದರಿಂದ ಕೆರೆ ಏರಿ ಮೇಲಿರುವ ಮರದ ಕೆಳಗೆ ಯುವಕರು ನಿಂತಿದ್ದರು. ಯುವಕರು ನಿಂತಿದ್ದ ಮರಕ್ಕೆ ಸಿಡಿಲು ಬಡಿದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಯುವಕರ ಮೃತದೇಹವನ್ನು ಮಾಯಕೊಂಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ದಾವಣಗೆರೆಯಲ್ಲಿ ಮಂಗಳವಾರ ಸಂಜೆಯಿಂದ ಗುಡುಗು ಸಿಡಿಲು ಸಹಿತ ಮಳೆಯಾಗಿದೆ.

ABOUT THE AUTHOR

...view details