ದಾವಣಗೆರೆ: ಮದುವೆ ಮುಗಿಸಿಕೊಂಡು ವಾಪಸ್ ಆಗುವಾಗ ಕಾರು ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ದಾವಣಗೆರೆಯ ಶಿರಮಗೊಂಡನಹಳ್ಳಿ ಬ್ರಿಡ್ಜ್ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಘಟನೆ ನಡೆದಿದೆ. ಅರುಣ್ ಶೆಟ್ಟರ್ (50), ವಿಜಯಲಕ್ಷ್ಮಿ ಶೆಟ್ಟರ್ (70) ಮೃತ ತಾಯಿ- ಮಗ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ದಾವಣಗೆರೆಯ ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದಾವಣಗೆರೆಯಲ್ಲಿ ಭೀಕರ ಕಾರು ಅಪಘಾತ: ಇಬ್ಬರು ಸಾವು, ಐವರಿಗೆ ಗಂಭೀರ ಗಾಯ - ರಾಷ್ಟ್ರೀಯ ಹೆದ್ದಾರಿ 4
ಕಾರು ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ದಾವಣಗೆರೆಯಲ್ಲಿ ಭೀಕರ ಕಾರು ಅಪಘಾತ: ಇಬ್ಬರು ಸಾವು, ಐವರಿಗೆ ಗಂಭೀರ ಗಾಯ
Published : Dec 4, 2023, 11:01 PM IST
7 ಜನ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದಿಂದ ತುಮಕೂರಿಗೆ ಮದುವೆಗೆ ತೆರಳಿ ಹೊಸರಿತ್ತಿ ಗ್ರಾಮಕ್ಕೆ ವಾಪಸ್ ಆಗುವಾಗ ಈ ಘಟನೆ ಸಂಭವಿಸಿದೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಕಂದಕಕ್ಕೆ ಉರುಳಿದ ಪ್ರವಾಸಿ ಟೆಂಪೋ ಟ್ರಾವೆಲರ್: ಇಬ್ಬರು ಪ್ರವಾಸಿಗರು ಸಾವು