ದಾವಣಗೆರೆ: ಜಿಲ್ಲೆಯಲ್ಲಿ 163 ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 14,406ಕ್ಕೇರಿದೆ.
ಮೃತರ ವಿವರ :
ಕೊರೊನಾ ಸೋಂಕಿಗೆ ಮೂವರು ಜನರು ಬಲಿಯಾಗಿದ್ದಾರೆ. ದಾವಣಗೆರೆಯ ಕೆಟಿಜೆ ನಗರದ 65 ವರ್ಷದ ವೃದ್ಧೆ, ಚನ್ನಗಿರಿ ತಾಲೂಕಿನ ನೀತಿಗೆರೆ ಗ್ರಾಮದ 60 ವರ್ಷದ ಮಹಿಳೆ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕಲಗೊಂಡ ಗ್ರಾಮದ 68 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಇದುವರೆಗೆ 231 ಜನರು ಸಾವನ್ನಪ್ಪಿದ್ದಾರೆ.