ಕರ್ನಾಟಕ

karnataka

ETV Bharat / state

ಮಲೆಬೆನ್ನೂರು ಸರ್ಕಾರಿ ಕಾಲೇಜಿನ 15 ಮಕ್ಕಳಿಗೆ ಕೋವಿಡ್‌, 7 ದಿನ ರಜೆ - ಮಲೆಬೆನ್ನೂರು ಸರ್ಕಾರಿ ಕಾಲೇಜಿನ ಹದಿನೈದು ಮಕ್ಕಳಿಗೆ ಕೊರೊನಾ ಏಳು ದಿನ ರಜೆ ಘೋಷಣೆ

ಹರಿಹರ ತಾಲೂಕಿನ ಮಲೆಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 363 ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, 15 ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ.

ಮಲೆಬೆನ್ನೂರು ಸರ್ಕಾರಿ ಕಾಲೇಜಿನ 15 ಮಕ್ಕಳಿಗೆ ಕೊರೊನಾ
ಮಲೆಬೆನ್ನೂರು ಸರ್ಕಾರಿ ಕಾಲೇಜಿನ 15 ಮಕ್ಕಳಿಗೆ ಕೊರೊನಾ

By

Published : Jan 14, 2022, 4:47 PM IST

ದಾವಣಗೆರೆ: ಹರಿಹರ ತಾಲೂಕಿನ ಮಲೆಬೆನ್ನೂರು ಸರ್ಕಾರಿ ಪದವಿಪೂರ್ವ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. 363 ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದು, ಹದಿನೈದು ಮಕ್ಕಳಿಗೆ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ ಕಾಲೇಜಿಗೆ 7 ದಿನ ರಜೆ ಘೋಷಣೆ ಮಾಡುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಸೋಂಕಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿದ್ಯಾರ್ಥಿಗಳ ಸಂಪರ್ಕದಲ್ಲಿರುವವರಿಗೂ ಕೂಡ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಟೆಸ್ಟ್​​ಗೆ ಒಳಪಡಿಸಿದ್ದು, ಪರೀಕ್ಷಾ ವರದಿ ಬರಬೇಕಿದೆ. ಪೋಷಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details