ಕರ್ನಾಟಕ

karnataka

ETV Bharat / state

ಶಾಸಕ ರಾಮಚಂದ್ರಪ್ಪ ವಿಶೇಷ ಪ್ರಯತ್ನ.. ಜಗಳೂರಿನ 100 ಗ್ರಾಪಂ ಸ್ಥಾನಗಳ ಅವಿರೋಧ ಆಯ್ಕೆ - davangere latest update news

ಜಗಳೂರು ಕ್ಷೇತ್ರದ ಬಿಜೆಪಿ ಶಾಸಕ ಎಸ್. ವಿ ರಾಮಚಂದ್ರಪ್ಪ ಅವರ ಪ್ರಯತ್ನದಿಂದ ಅವಿರೋಧ ಆಯ್ಕೆಗಳು ನಡೆದಿವೆ. ಶಾಸಕರು ವಿವಿಧ ಗ್ರಾಮಗಳಲ್ಲಿ ಸುತ್ತಿ ತಮ್ಮ ಕಾರ್ಯಕರ್ತರ ಸಹಾಯಕ್ಕೆ ಮುಂದಾಗಿದ್ದಾರೆ‌..

davangere
ಶಾಸಕ ರಾಮಚಂದ್ರಪ್ಪನವರ ವಿನೂತನ ಪ್ರಯತ್ನ:100 ಸ್ಥಾನಗಳಿಗೆ ಅವಿರೋಧ ಆಯ್ಕೆ

By

Published : Dec 16, 2020, 3:54 PM IST

ದಾವಣಗೆರೆ :ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್‌ಗಳ ಚುನಾವಣೆ ಬೆನ್ನಲ್ಲೇ ಅವಿರೋಧ ಆಯ್ಕೆಯ ಪರ್ವ ಜೋರಾಗಿದೆ. ಜಗಳೂರು ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳ 100 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಜಗಳೂರು ಕ್ಷೇತ್ರದ ಬಿಜೆಪಿ ಶಾಸಕ ಎಸ್. ವಿ ರಾಮಚಂದ್ರಪ್ಪ ಅವರ ಪ್ರಯತ್ನದಿಂದ ಅವಿರೋಧ ಆಯ್ಕೆಗಳು ನಡೆದಿವೆ. ಶಾಸಕರು ವಿವಿಧ ಗ್ರಾಮಗಳಲ್ಲಿ ಸುತ್ತಿ ತಮ್ಮ ಕಾರ್ಯಕರ್ತರ ಸಹಾಯಕ್ಕೆ ಮುಂದಾಗಿದ್ದಾರೆ‌. ಜತೆಗೆ ವಿವಿಧ ಗ್ರಾಮಗಳಲ್ಲಿನ ಕೆಲ ಬೇರೆ ಪಕ್ಷಗಳ ಒಂದಿಷ್ಟು ಮುಖಂಡರನ್ನ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ.

ತಾಲೂಕಿನ ಒಟ್ಟು 22 ಗ್ರಾಮ ಪಂಚಾಯತ್‌ಗಳ 397 ಸ್ಥಾನಗಳ ಪೈಕಿ 100 ಸ್ಥಾನಗಳಿಗೆ ಅವಿರೋಧ ಆಯ್ಕೆ‌ ನಡೆದಿದ್ದು, ಇನ್ನುಳಿದ 297 ಸ್ಥಾನಗಳಿಗೆ ನಿಗದಿತ ದಿನಾಂಕದಂದು ಚುನಾವಣೆ ನಡೆಯಲಿದೆ.

ABOUT THE AUTHOR

...view details