ದಾವಣಗೆರೆ: ವಿಷಪೂರಿತ ಮೇವು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ಹೊನ್ನಾಳಿ ತಾಲ್ಲೂಕಿನ ಸೂರಮಟ್ಟಿ ಗ್ರಾಮದಲ್ಲಿ ನಡೆದಿದೆ.
ವಿಷಪೂರಿತ ಮೇವು ಸೇವನೆ ಶಂಕೆ, 10 ಕುರಿಗಳು ಬಲಿ - poisoned forage
ಜಿಲ್ಲೆಯ ಸೂರಮಟ್ಟಿ ಗ್ರಾಮದ ರವಿಯಪ್ಪ ಎಂಬವರಿಗೆ ಸೇರಿದ 10 ಕುರಿಗಳು ವಿಷಪೂರಿತ ಮೇವು ಸೇವಿಸಿ ಮೃತಪಟ್ಟಿವೆ.
ಸಾವಿಗೀಡಾದ ಕುರಿಗಳು
ಕುರಿಗಾಯಿ ರವಿಯಪ್ಪ ಎಂಬುವವರಿಗೆ ಸೇರಿದ ಕುರಿಗಳಾಗಿದ್ದು, ಮೇಯಲು ಹೋದ ಸಂದರ್ಭದಲ್ಲಿ ವಿಷಪೂರಿತ ಆಹಾರ ಸೇವಿಸಿರಬಹುದು ಎನ್ನಲಾಗಿದೆ. ಮೇವು ಸೇವಿಸಿದ ನಂತರ ರಾತ್ರಿಯಿಡೀ ಬಳಲಿ ಕುರಿಗಳು ಸಾವನ್ನಪ್ಪಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕುರಿಗಳ ಕಳೇಬರವನ್ನು ಸಾಸ್ವೆಹಳ್ಳಿ ಪಶುಚಿಕಿತ್ಸಾ ಕೇಂದ್ರದಲ್ಲಿ ಪರೀಕ್ಷಿಸಲಾಗಿದ್ದು, ವಿಷಪೂರಿತ ಆಹಾರ ಸೇವನೆಯಿಂದಲೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
Last Updated : Oct 16, 2019, 1:30 PM IST