ರಾಣೇಬೆನ್ನೂರು: ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವ ಪೊಲೀಸ್ ಇಲಾಖೆ, ಅರೋಗ್ಯ ಇಲಾಖೆ ಹಾಗೂ ನಗರ ಮತ್ತು ಗ್ರಾಮಗಳ ಪೌರಕಾರ್ಮಿಕರಿಗೆ ಒಂದು ಲಕ್ಷ ಮಾಸ್ಕ್ ವಿತರಣೆ ಮಾಡಲಾಯಿತು.
ತಾಲೂಕಿನ ಆರೇಮಲ್ಲಾಪುರ ಗ್ರಾಮದ ಶರಣಬಸವೇಶ್ವರ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಡಾ. ಪ್ರಣವಾನಂದರಾಮ ಸ್ವಾಮೀಜಿಯವರು ವಿತರಣೆ ಮಾಡಿದರು.
ಇದೇ ವೇಳೆ ಶಾಲಾ ಮಕ್ಕಳಿಗೂ ಸಹ ಹತ್ತು ಸಾವಿರ ಮಾಸ್ಕ್ಗಳನ್ನು ಶಿಕ್ಷಣಾಧಿಕಾರಿ ಮೂಲಕ ವಿತರಿಸಲಾಯಿತು.
ರಾಣೆಬೆನ್ನೂರು ತಾಲೂಕಿನಲ್ಲಿ ಒಂದು ಲಕ್ಷ ಮಾಸ್ಕ್ ವಿತರಣೆ ಬಳಿಕ ಮಾತನಾಡಿದ ಸ್ವಾಮೀಜಿ, ಮಠದ ವತಿಯಿಂದ ಜನಸೇವೆಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಇಂದು ಸಹ ಕೊರೊನಾ ವಿರುದ್ಧ ಹೋರಾಡುವವರಿಗೆ ಮಠದ ವತಿಯಿಂದ ಮಾಸ್ಕ್ ವಿತರಣೆ ಮಾಡಲಾಗಿದೆ ಎಂದರು. ಶಾಸಕ ಅರುಣಕುಮಾರ ಪೂಜಾರ, ಗಣೇಶ ಸಿದ್ದಾಳಿ, ರಾಜು ಸೂರ್ವೆ, ಶಿವು ಸಣ್ಣಬೊಮ್ಮಾಜಿ ಹಾಜರಿದ್ದರು.