ಕರ್ನಾಟಕ

karnataka

ETV Bharat / state

ಯುವತಿ ಅಪಹರಣ ಆರೋಪ: ಗುಂಪಿನಿಂದ ದಾಳಿ,ಪೊಲೀಸರಿಗೆ ಗಾಯ - kannada news

ಕುಂಬ್ಳೆ ಎಂಬಲ್ಲಿಂದ ಯುವತಿಯ ಅಪಹರಣ ಅರೋಪದ ಹಿನ್ನೆಲೆಯಲ್ಲಿ ಯುವತಿ ಮತ್ತು ಯುವಕನಿದ್ದ ಕಾರನ್ನು ಹಿಂಬಾಲಿಸಿದ ಜನರ ಗುಂಪು ದಾಳಿ ನಡೆಸಿದೆ. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಯವತಿಯ ಅಪಹರಣ ಅರೋಪ ಪ್ರಕರಣ ಯುವತಿ ಮತ್ತು ಯುವಕನಿದ್ದ ಕಾರನ್ನು ಹಿಂಬಾಲಿಸಿ ದಾಳಿ ನಡೆಸಿದ ಜನರ ಗುಂಪು

By

Published : May 14, 2019, 11:18 PM IST

ಮಂಗಳೂರು:ಕಾಸರಗೋಡು ಜಿಲ್ಲೆಯ ಕುಂಬ್ಳೆ ಗ್ರಾಮದ ಕಳತ್ತೂರು ಎಂಬಲ್ಲಿಂದ ಯುವತಿಯೋರ್ವಳನ್ನು ಆಕೆಯ ಮನೆಯಿಂದಲೇ ಅಪಹರಿಸಲಾಗಿದೆ ಎಂದು‌ ಆರೋಪಿಸಿ, ವಿಟ್ಲದ ಸಾರಡ್ಕದಲ್ಲಿ ವಾಹನದ ಮೇಲೆ ದಾಳಿ ನಡೆಸಿ, ಹಲ್ಲೆ ಮಾಡಿದ ಘಟನೆ ನಿನ್ನೆ ಸಂಜೆ ನಡೆದಿದೆ.

ಸುಪ್ರಿತ್ ಎಂಬ ಯುವಕ ಮಂಗಳೂರಿನ ಆರ್ಯ ಸಮಾಜದಲ್ಲಿ ತನ್ನ ಮದುವೆ ಇಟ್ಟುಕೊಂಡಿದ್ದು, ಕೇರಳದ ಕುಂಬ್ಳೆಯ ಯುವತಿಯನ್ನು ಅವಳ ಮನೆಯಿಂದ ಗೆಳೆಯರೊಂದಿಗೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದಾನೆ ಎನ್ನಲಾಗಿದೆ. ಯುವತಿ ಅಪಹರಣವಾಗಿದ್ದಾಳೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ಗಡಿಭಾಗದಲ್ಲಿ ಹಲವು ಮಂದಿ ಹೊಂಚು ಹಾಕಿ ಕಾಯುತ್ತಿದ್ದರು.ಯುವಕ,ಯುವತಿಯಿದ್ದ ಬೊಲೆರೋ ಕಾರು ಬರುವುದನ್ನು ಗಮನಿಸಿದ ಜನರ ಗುಂಪು ಅವರನ್ನು ಹಿಂಬಾಲಿಸಿ ಕಲ್ಲು ಎಸೆದಿದ್ದಾರೆ ಎನ್ನಲಾಗಿದೆ.

ಸಂಜೆ ಸುಮಾರು 7.45 ಕ್ಕೆ ಸಾರಡ್ಕ ಎಂಬಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ, ಆರೋಪಿಗಳು ಸುಪ್ರೀತ್ ಮತ್ತು ಯುವತಿ ಇರುವ ವಾಹನವನ್ನು ಅಡ್ಡಗಟ್ಟಿ ಕಿಟಕಿ ಮೂಲಕ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಪೊಲೀಸರು ತಡೆಯಲು ಪ್ರಯತ್ನಿಸಿದರೂ ಕೂಡ ಅವರನ್ನು ತಳ್ಳಿ ಹಲ್ಲೆ ನಡೆಸಲಾಗಿದೆ. ಸ್ಥಳಕ್ಕೆ ಪೊಲೀಸರು ಬಂದ ನಂತರ ತಮ್ಮ ವಾಹನಗಳನ್ನು ಬಿಟ್ಟು ಓಡಿ ಹೋಗಿ ದೂರದಿಂದ ಕಲ್ಲುಎಸೆದಿದ್ದಾರೆ. ಘಟನೆಯಲ್ಲಿ ಪ್ರೊಬೆಷನರಿ ಉಪನಿರೀಕ್ಷಕರೊಬ್ಬರ ಕೈಗೆ ಗಾಯವಾಗಿದೆ.

ಬಂಟ್ವಾಳ ವೃತ್ತ ನಿರೀಕ್ಷಕ ಶರಣಗೌಡ ನೇತೃತ್ವದಲ್ಲಿ ವಿಟ್ಲ ಪ್ರೊಬೆಷನರಿ ಉಪನಿರೀಕ್ಷಕ ಕೀರ್ತಿ ಕುಮಾರ್ ಹಾಗೂ ರಾಜೇಶ್ ತಂಡ ಪರಿಸ್ಥಿತಿಯನ್ನು ನಿಭಾಯಿಸಿದೆ. ಅಲ್ಲದೇ ಈ ಸಂದರ್ಭ ಹಲವು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬದಿಯಡ್ಕ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details