ಕರ್ನಾಟಕ

karnataka

ETV Bharat / state

ಚಪ್ಪಲಿ ಹಾಕಿಕೊಂಡೇ ಯುವಕರ ದೇವಾಲಯ ಪ್ರವೇಶ ಆರೋಪ.. ವಿಡಿಯೋ ವೈರಲ್ ಆದ ಬಳಿಕ ಕ್ರಮಕ್ಕೆ ಆಗ್ರಹ

ದೇವಸ್ಥಾನ ಅಪವಿತ್ರಗೊಳಿಸಿರುವ ಈ ಯುವಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ. ಈ ವಿಡಿಯೋ ಯಾವಾಗ ಚಿತ್ರೀಕರಣವಾಗಿದ್ದು ಎಂಬ ಕುರಿತು ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ..

youths-entered-temple-with-wearing-slippers-video-gone-viral
ಚಪ್ಪಲಿ ಹಾಕಿಕೊಂಡೇ ದೇವಾಲಯ ಪ್ರವೇಶ ಆರೋಪ

By

Published : Nov 3, 2021, 2:12 PM IST

Updated : Nov 4, 2021, 11:12 AM IST

ಬಂಟ್ವಾಳ (ದ.ಕ): ಜಿಲ್ಲೆಯ ಪುರಾಣ ಪ್ರಸಿದ್ಧ ಪರ್ವತ ಕ್ಷೇತ್ರಗಳಲ್ಲೊಂದಾದ ಮಹಾತೋಭಾರ ಶ್ರೀ ಕಾರಿಂಜ ಕ್ಷೇತ್ರದ ಶಿವನ ಸಾನಿಧ್ಯಕ್ಕೆ ಯುವಕರ ತಂಡ ಪಾದರಕ್ಷೆ ಧರಿಸಿ ಒಳಪ್ರವೇಶಿಸಿದ್ದಾರೆ ಎನ್ನಲಾದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯುವಕರ ಈ ವರ್ತನೆಗೆ ಭಕ್ತಾದಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ವಿಷಯ ತಿಳಿದ ತಕ್ಷಣ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉನ್ನತ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಈ ರೀತಿಯ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಂಟ್ವಾಳದಲ್ಲಿ ಶಾಂತಿ ಕದಡಲು ಪ್ರಯತ್ನಿಸಿದ ದುಷ್ಕರ್ಮಿಗಳನ್ನು ಮಟ್ಟ ಹಾಕಲು ಕಾನೂನು ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.

ಚಪ್ಪಲಿ ಹಾಕಿಕೊಂಡೇ ದೇವಾಲಯ ಪ್ರವೇಶ ಆರೋಪ

ಐವರು ಯುವಕರ ತಂಡ ಮೋಜು-ಮಸ್ತಿ ಮಾಡಲು ಕಾರಿನಲ್ಲಿ ಕಾರಿಂಜ ಕ್ಷೇತ್ರಕ್ಕೆ ಆಗಮಿಸಿದ್ದರು. ಈ ಸಂದರ್ಭ ಪಾದರಕ್ಷೆ ಧರಿಸಿಕೊಂಡೇ ದೇವಸ್ಥಾನದ ಒಳಾಂಗಣ ಪ್ರವೇಶಿಸಿರುವುದಲ್ಲದೆ, ಅಲ್ಲಿ ಮೋಜು- ಮಸ್ತಿ ಮಾಡಿದ್ದಾರೆ ಎನ್ನಲಾಗ್ತಿದೆ.

ದೇವಸ್ಥಾನ ಅಪವಿತ್ರಗೊಳಿಸಿರುವ ಈ ಯುವಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ. ಈ ವಿಡಿಯೋ ಯಾವಾಗ ಚಿತ್ರೀಕರಣವಾಗಿದ್ದು ಎಂಬ ಕುರಿತು ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ.

ಇದನ್ನೂ ಓದಿ:ತುಮಕೂರಿನಲ್ಲಿ ಮತ್ತೋರ್ವ ಪುನೀತ್ ರಾಜ್​​ಕುಮಾರ್ ಅಭಿಮಾನಿ ಹೃದಯಾಘಾತದಿಂದ ಸಾವು!

Last Updated : Nov 4, 2021, 11:12 AM IST

ABOUT THE AUTHOR

...view details