ಕಡಬ(ದಕ್ಷಿಣ ಕನ್ನಡ): ರೈಲಿಗೆ ಸಿಲುಕಿ ಯುವಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಕೋಡಿಂಬಾಳ ರೈಲ್ವೆ ನಿಲ್ದಾಣದ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
ರೈಲಿಗೆ ಸಿಲುಕಿ ಯುವಕ ಸಾವು... ಮೃತದೇಹದ ಪಕ್ಕ ಮದ್ಯದ ಬಾಟಲಿ ಪತ್ತೆ - ದಕ್ಷಿಣ ಕನ್ನಡ ಕೋಡಿಂಬಾಳ ರೈಲ್ವೇ ನಿಲ್ದಾಣ ಯುವಕ ಸಾವು
ರೈಲಿಗೆ ಸಿಲುಕಿ ಯುವಕನೋರ್ವ ಮೃತಪಟ್ಟ ಘಟನೆ ಕಡಬ ಸಮೀಪದ ಕೋಡಿಂಬಾಳ ರೈಲ್ವೆ ನಿಲ್ದಾಣದ ಬಳಿ ಇಂದು ಬೆಳಗ್ಗೆ ನಡೆದಿದೆ.
![ರೈಲಿಗೆ ಸಿಲುಕಿ ಯುವಕ ಸಾವು... ಮೃತದೇಹದ ಪಕ್ಕ ಮದ್ಯದ ಬಾಟಲಿ ಪತ್ತೆ kodimbala](https://etvbharatimages.akamaized.net/etvbharat/prod-images/768-512-5546420-thumbnail-3x2-vid.jpg)
ಸಾವನ್ನಪ್ಪಿದ ಯುವಕ
ಕೋಡಿಂಬಾಳ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ ಬಳಿ ರೈಲಿಗೆ ಸಿಲುಕಿ ಯುವಕ ಸಾವು.
ಮೃತ ಯುವಕನನ್ನು ಸುಳ್ಯ ತಾಲೂಕಿನ ಪಂಜ ಸಮೀಪದ ನೇಲ್ಯಡ್ಕ ನಿವಾಸಿ ವಿನೀತ್ ಎಂದು ಗುರುತಿಸಲಾಗಿದೆ. ಬೆಳಗ್ಗೆ ಕೋಡಿಂಬಾಳ ರೈಲ್ವೆ ನಿಲ್ದಾಣದ ಫ್ಲ್ಯಾಟ್ ಫಾರಂ ಬಳಿ ರೈಲು ಡಿಕ್ಕಿ ಹೊಡೆದು ಹಳಿಗೆ ಬಿದ್ದ ಸ್ಥಿತಿಯಲ್ಲಿ ವಿನೀತ್ನ ಮೃತದೇಹ ಕಂಡುಬಂದಿದೆ. ಇನ್ನು ಪಕ್ಕದಲ್ಲೇ ಮದ್ಯದ ಬಾಟಲ್ ಸಿಕ್ಕಿದ್ದು, ಫ್ಲಾಟ್ ಫಾರಂನಲ್ಲಿ ಕುಳಿತಿದ್ದ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದಾಗ ರೈಲಿಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮಂಗಳೂರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.