ಕರ್ನಾಟಕ

karnataka

ETV Bharat / state

ಬಂಟ್ವಾಳದಲ್ಲಿ ಬೈಕ್​ ಹಾರನ್​ ವಿಚಾರವಾಗಿ ಯುವಕನ ಹತ್ಯೆ: ಆರೋಪಿಗಳಿಬ್ಬರ ಬಂಧನ - ಬೈಕ್​ ಹಾರನ್​ ವಿಚಾರವಾಗಿ ಯುವಕನ ಕೊಲೆ

ಬೈಕ್​ ಹಾರನ್‌ನಿಂದ ಉಂಟಾದ ಜಗಳದಲ್ಲಿ ಯುವಕನೊಬ್ಬ ಪ್ರಾಣ ತೆತ್ತ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬೈಕ್​ ಹಾರನ್​ ವಿಚಾರದ ಜಗಳದಲ್ಲಿ ಯುವಕನ ಹತ್ಯೆ
ಬೈಕ್​ ಹಾರನ್​ ವಿಚಾರದ ಜಗಳದಲ್ಲಿ ಯುವಕನ ಹತ್ಯೆ

By

Published : Jul 5, 2022, 9:54 AM IST

ಬಂಟ್ವಾಳ:ಬೈಕ್​ ಹಾರನ್​ ವಿಚಾರಕ್ಕೆ ನಡೆದ ಜಗಳ ಅತಿರೇಖಕ್ಕೆ ತಿರುಗಿ ಯುವಕನೊಬ್ಬನನ್ನು ಕೊಲೆ ಮಾಡಿದ ಘಟನೆ ಬಿ.ಸಿ.ರೋಡಿನ ಶಾಂತಿಯಂಗಡಿ ಸಮೀಪದ ತಲಪಾಡಿಯಲ್ಲಿ ನಡೆದಿದೆ. ಮಹಮ್ಮದ್ ಆಸಿಫ್ ಮೃತಪಟ್ಟ ವ್ಯಕ್ತಿ. ಘಟನೆಗೆ ಸಂಬಂಧಿಸಿ ಆರೋಪಿಗಳಾದ ಮಹಮ್ಮದ್ ನೌಫೆಲ್, ಮಹಮ್ಮದ್ ನೌಸೀರ್​ ಎಂಬುವರನ್ನು ಬಂಟ್ವಾಳ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಸೋಮವಾರ ತಡರಾತ್ರಿ ಪೊನ್ನೋಡಿಯ ಹೋಟೆಲ್​ ಮುಂದೆ ಬೈಕ್​ ಹಾರನ್​ ವಿಚಾರವಾಗಿ ಆಸಿಫ್​ ಮತ್ತು ಆರೋಪಿಗಳ ಮಧ್ಯೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಆರೋಪಿಗಳಾದ ಮಹಮ್ಮದ್ ನೌಫೆಲ್, ಮಹಮ್ಮದ್ ನೌಸೀರ್​ ಆಸೀಫ್​ನನ್ನು ಹತ್ಯೆ ಮಾಡಿದ್ದಾರೆ. ಸಹಾಯಕ್ಕೆ ಬಂದ ಆಸೀಫ್​ ಸ್ನೇಹಿತ ನೌಫಲ್​ ಘಟನೆಯಲ್ಲಿ ಗಾಯಗೊಂಡಿದ್ದಾನೆ.

ಈ ಕುರಿತು ಮೃತ ನೌಫಲ್ ಶಾಂತಿಯಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲಿಸ್​ ಇನ್ಸ್​ಪೆಕ್ಟರ್ ವಿವೇಕಾನಂದ, ಎಸ್.ಐ. ಅವಿನಾಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ:ಬಂಧಿತ ಐಎಎಸ್, ಐಪಿಎಸ್ ಅಧಿಕಾರಿಗಳ ಅಮಾನತುಗೊಳಿಸಿ ಸರ್ಕಾರ ಆದೇಶ

ABOUT THE AUTHOR

...view details