ಕರ್ನಾಟಕ

karnataka

ETV Bharat / state

ಮಂಗಳೂರು: ನಿಫಾ ಆತಂಕಿತ ಯುವಕನ ಪರೀಕ್ಷಾ ವರದಿ ನೆಗೆಟಿವ್

ನಿಫಾ ಇರುವ ಶಂಕೆ ವ್ಯಕ್ತಪಡಿಸಿದ ಕಾರಣ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡದೇ ಆತನ ಮಾದರಿಯನ್ನು ಪಡೆದು ಬೆಂಗಳೂರು ಮೂಲಕ ಪುಣೆ ಲ್ಯಾಬ್​​ಗೆ ಕಳುಹಿಸಲಾಗಿತ್ತು. ಇದೀಗ ಆತನ ಮಾದರಿ ನೆಗೆಟಿವ್ ಬಂದಿದ್ದು ಆತಂಕ ದೂರಾಗಿದೆ.

youth-from-karwar-report-negative-for-nipah-virus
ನಿಫಾ ಆತಂಕಿತ ಯುವಕನ ಪರೀಕ್ಷಾ ವರದಿ ನೆಗೆಟಿವ್

By

Published : Sep 15, 2021, 10:05 AM IST

ಮಂಗಳೂರು: ಮಂಗಳೂರಿನಲ್ಲಿ ನಿಫಾ ಆತಂಕಿತ ಯುವಕನ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಆತಂಕ ದೂರವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಯುವಕನ ವರದಿ ನೆಗೆಟಿವ್ ಬಂದಿದೆ ಎಂದಿದ್ದಾರೆ.

ಕಾರವಾರ ಮೂಲದ ಯುವಕ ಸ್ವ -ಇಚ್ಛೆಯಿಂದ ನಿಫಾ ವೈರಸ್ ಪರೀಕ್ಷೆ ಮಾಡುವಂತೆ ಮಂಗಳೂರಿಗೆ ಬಂದಿದ್ದ.‌ ಈತ ಗೋವಾದಲ್ಲಿ ಹಿಂದೆ ಆರ್​ಟಿಪಿಸಿಆರ್​​ ಕಿಟ್ ತಯಾರಿಸುವ ಮತ್ತು ಇದೀಗ ನಿಫಾ ಸೋಂಕಿಗೆ ಸಂಬಂಧಿಸಿದ ಕಿಟ್ ತಯಾರಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಸ್ವಯಂ ರಕ್ಷಕ ಸಾಧನವನ್ನು ಧರಿಸಿ ಕೆಲಸ ಮಾಡುತ್ತಿದ್ದರೂ ಫೋಬಿಯಾದಿಂದ ಆತ ನಿಫಾ ಬಗ್ಗೆ ಆತಂಕಗೊಂಡು ಪರೀಕ್ಷೆಗೆ ಬಂದಿದ್ದ ಎಂದಿದ್ದಾರೆ.

ಆತನಿಗೆ ನಿಫಾದ ಯಾವುದೇ ಲಕ್ಷಣ ಇಲ್ಲದಿದ್ದರೂ, ದೃಢವಾಗಿ ನಿಫಾ ಇರುವ ಶಂಕೆ ವ್ಯಕ್ತಪಡಿಸಿದ ಕಾರಣ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡದೇ ಆತನ ಮಾದರಿಯನ್ನು ಪಡೆದು ಬೆಂಗಳೂರು ಮೂಲಕ ಪುಣೆ ಲ್ಯಾಬ್​​ಗೆ ಕಳುಹಿಸಲಾಗಿತ್ತು. ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಷನ್​​ನಲ್ಲಿ ಇರಿಸಲಾಗಿತ್ತು. ಇದರ ಪರೀಕ್ಷಾ ವರದಿ ಬಂದಿದ್ದು ರಿಪೋರ್ಟ್ ನೆಗೆಟಿವ್ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ:ಹಿಂದೂ ಮಹಿಳೆಯೊಂದಿಗೆ ಮುಸ್ಲಿಂ ವ್ಯಕ್ತಿಯ ಎರಡನೇ ವಿವಾಹ ಅನೂರ್ಜಿತ: ಗುವಾಹಟಿ ಹೈಕೋರ್ಟ್​​

ABOUT THE AUTHOR

...view details