ಕರ್ನಾಟಕ

karnataka

ETV Bharat / state

ಅಪಘಾತಕ್ಕೊಳಗಾದ ವ್ಯಕ್ತಿಗೆ ಉಪಚರಿಸಿದ ಯುವಕನಿಗೆ ಲಾರಿ ಡಿಕ್ಕಿ: ಗಂಭೀರವಾಗಿದ್ದ ತೇಜಸ್​ ಸಾವು - ಮಂಗಳೂರಲ್ಲಿ ರಸ್ತೆ ಅಪಘಾತ

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್​ ಸವಾರನಿಗೆ ಸಹಾಯ ಮಾಡಲು ಮುಂದಾಗಿದ್ದ ಯುವಕನಿಗೆ ಲಾರಿ ಡಿಕ್ಕಿ ಹೊಡೆದು ಆತ ಗಂಭೀರಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಬೈಕಂಪಾಡಿಯಲ್ಲಿ ನಡೆದಿದೆ.

ಅಪಘಾತದಲ್ಲಿ ಯುವಕ ಸಾವು
Youth died by lorry accident in Mangalore

By

Published : Jul 11, 2021, 6:20 PM IST

ಮಂಗಳೂರು:ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಉಪಚರಿಸಿ, ಆತನ ಬೈಕನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲು ಮುಂದಾಗಿದ್ದ ಯುವಕನಿಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಬೈಕಂಪಾಡಿಯಲ್ಲಿ ನಡೆದಿದೆ.

ಮೃತ ಯುವಕ ತೇಜಸ್‌ (28) ಸುಳ್ಯ ತಾಲೂಕಿನ ಮರ್ಕಜೆಯ ದೊಡ್ಡತೋಟ ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ನಿನ್ನೆ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ದ್ವಿಚಕ್ರ ವಾಹವೊಂದು ಅಪಘಾತಕ್ಕೀಡಾಗಿತ್ತು. ಇದನ್ನು ಗಮನಿಸಿದ ತೇಜಸ್, ಗಾಯಾಳುವನ್ನು ಉಪಚರಿಸಿ ಆತನ ಬೈಕ್​ನನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲು ದೂಡಿಕೊಂಡು ಹೋಗುತ್ತಿದ್ದನು.

ಅದೇ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿಯೊಂದು ತೇಜಸ್​​​​ ದೂಡಿಕೊಂಡು ಹೋಗುತ್ತಿದ್ದ ಬೈಕ್​ ಡಿಕ್ಕಿ ಹೊಡೆದು ವಾಹನದ ಜೊತೆಗೆ ಯುವಕನನ್ನು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿದೆ. ಪರಿಣಾಮ ಘಟನೆಯಲ್ಲಿ ತೇಜಸ್​​ನ ಸೊಂಟದ ಕೆಳಭಾಗಕ್ಕೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್​ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವಿಪರೀತ ರಕ್ತಸ್ರಾವದಿಂದ ತೇಜಸ್ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ಯುವಕನ ಮೃತದೇಹ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿದ್ದು, ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details