ಕರ್ನಾಟಕ

karnataka

ETV Bharat / state

ಬಸ್ ಚಕ್ರದಡಿ ಸಿಲುಕಿ ಯುವಕ ಸಾವು - Mangalore crime latest news

ಮಂಗಳೂರಿನ ಸುರತ್ಕಲ್​​ನಲ್ಲಿ ಬಸ್​​ ಚಕ್ರಕ್ಕೆ ಸಿಲುಕಿ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.

Youth died
Youth died

By

Published : Jul 25, 2020, 12:21 PM IST

ಮಂಗಳೂರು:ಬಸ್​​​ ಚಕ್ರದಡಿ ಸಿಲುಕಿ ಯುವಕ ಸಾವನ್ನಪ್ಪಿರುವ ಘಟನೆ ಸುರತ್ಕಲ್ ಗ್ರಾಮದ ಬಳಿ ನಡೆದಿದೆ.

ಅವಿನಾಶ್(20) ಮೃತ ಯುವಕ. ಸುರತ್ಕಲ್ ಮಧ್ಯ ಗ್ರಾಮದ ಬಳಿ ಈತ ಸಿಟಿ ಬಸ್​ನಿಂದ ಇಳಿಯುತ್ತಿದ್ದ. ಈ ವೇಳೆ ಬಸ್​​ನಿಂದ ಆಯತಪ್ಪಿ ಬಿದ್ದು ಹಿಂದಿನ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ.

ಬಳಿಕ ಯುವಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಮಂಗಳೂರು ನಗರ ಉತ್ತರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details