ಕರ್ನಾಟಕ

karnataka

ETV Bharat / state

ಎಸ್​ಡಿಪಿಐ ಪಕ್ಷ ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ : ಮಿಥುನ್ ರೈ

ಇತ್ತೀಚೆಗೆ ನಕಲಿ ನೋಟ್​​ಗಳಲ್ಲಿ ಹಿಂದೂ ಧರ್ಮದ ಭಾವನೆಗೆ ಧಕ್ಕೆ ತರವಂತಹ ಬರಹವನ್ನು ಬರೆದು ಮಂಗಳೂರಿನ ಮೂರು ದೇವಸ್ಥಾನಗಳ ಕಾಣಿಕೆ ಹುಂಡಿಯಲ್ಲಿ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ನಿಜಕ್ಕೂ ಖಂಡನೀಯ..

Youth Congress President Mithun Rai
ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ

By

Published : Jan 3, 2021, 2:24 PM IST

ಮಂಗಳೂರು :ಎಸ್​ಡಿಪಿಐ ಪಕ್ಷ ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆರೋಪಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಳೆಯಂಗಡಿ ಗ್ರಾಪಂನಲ್ಲಿ ಎಸ್​ಡಿಪಿಐ ಬಿಜೆಪಿಯವರೊಂದಿಗೆ ಸೇರಿಕೊಂಡು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು‌ ಸೋಲಿಸುವಂತಹ ಕಾರ್ಯವನ್ನು ಮಾಡಿದ್ದಾರೆ ಎಂದು ಹೇಳಿದರು.

ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ

ಎಸ್​ಡಿಪಿಐ ಯಾರ ಜೊತೆಗಿದೆ ಹಾಗೂ ಯಾರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಜನರಿಗೆ ತಿಳಿದಿದೆ. ಕಾಂಗ್ರೆಸ್ ಜಾತ್ಯಾತೀತ ನಿಲುವು ಹೊಂದಿರುವ ರಾಷ್ಟ್ರೀಯ ಪಕ್ಷವಾಗಿದೆ. ಸರ್ವಧರ್ಮಗಳನ್ನು ಸಮಾನವಾಗಿ ಕಾಣುತ್ತಿದೆ.

ನಮಗೆ ಪಕ್ಷದ ಸಿದ್ಧಾಂತದ ಮೇಲೆ ಅಚಲ ನಂಬಿಕೆಯಿದೆ. ‌ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತ ಗಳಿಸಲಿದೆ. ಅದಕ್ಕೆ ಈಗಾಗಲೇ ತಯಾರಿ ನಡೆಸುತ್ತಿದ್ದೇವೆ ಎಂದು ಹೇಳಿದರು.

ಓದಿ:ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ವಿಶೇಷ ಸಭೆ ಪ್ರಾರಂಭ: ಸಂಘಟನೆಯ ಬಲವರ್ಧನೆಗೆ ಚರ್ಚೆ

ಇತ್ತೀಚೆಗೆ ನಕಲಿ ನೋಟ್​​ಗಳಲ್ಲಿ ಹಿಂದೂ ಧರ್ಮದ ಭಾವನೆಗೆ ಧಕ್ಕೆ ತರವಂತಹ ಬರಹವನ್ನು ಬರೆದು ಮಂಗಳೂರಿನ ಮೂರು ದೇವಸ್ಥಾನಗಳ ಕಾಣಿಕೆ ಹುಂಡಿಯಲ್ಲಿ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ನಿಜಕ್ಕೂ ಖಂಡನೀಯ.

ಈ ಕೃತ್ಯವನ್ನು ಮಾಡಿರುವವರು ದ.ಕ. ಜಿಲ್ಲೆಗೆ ಕಪ್ಪು ಚುಕ್ಕೆ ತರುವ ಕೆಲಸ ಮಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ. ಆದ್ದರಿಂದ ಇಂತಹ ವಿಕೃತ ಮನೋಭಾವ ಇರುವವರಿಗೆ ಕಠಿಣ ಶಿಕ್ಷೆಯಾಗುವವರೆಗೆ ಹೋರಾಟ ಮಾಡಬೇಕಾಗಿದೆ ಎಂದರು.

ಈಗಾಗಲೇ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನೂತನ ಮಂಗಳೂರು ನಗರ ಪೊಲೀಸ್ ಆಯುಕ್ತರು ಈ ಕೃತ್ಯಗಳಲ್ಲಿ ತೊಡಗಿರುವವರನ್ನು ತಕ್ಷಣ ಬಂಧಿಸಿ‌ ಸಾರ್ವಜನಿಕ ಸ್ಥಳದಲ್ಲಿ ‌ಶಿಕ್ಷೆ ವಿಧಿಸಬೇಕು.

ಸಮಾಜ ಅವರನ್ನು ಬಹಿಷ್ಕರಿಸಬೇಕು. ಅಲ್ಲದೇ ಮಂಗಳೂರು ಮನಪಾ ಮೇಯರ್ ಹಾಗೂ ಮನಪಾ ಆಯುಕ್ತರು ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಮಿಥುನ್ ರೈ ಆಗ್ರಹಿಸಿದರು.

ABOUT THE AUTHOR

...view details