ಬಂಟ್ವಾಳ:ಬಿ.ಸಿ ರೋಡ್ನಿಂದ ಮುಲ್ಕಿಯವರೆಗೆ ರಸ್ತೆ ಬದಿಯಲ್ಲಿರುವ ನಿರ್ಗತಿಕರು, ಚೆಕ್ ಪೋಸ್ಟ್ಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಸೇರಿದಂತೆ ಸುಮಾರು 600 ಮಂದಿಗೆ ಊಟ ನೀಡುವ ಮೂಲಕ ಬಂಟ್ವಾಳದ ಯುವಕಎಲ್ಲರಿಗೂ ಮಾದರಿಯಾಗಿದ್ದಾರೆ. ಬಿಜೈ ಕಾಪಿಕಾಡಿನ ಸ್ನೇಹದೀಪ್ ಹೋಮ್ ಫಾರ್ ಚಿಲ್ಡ್ರನ್ಸ್ ಸಂಸ್ಥೆ ಹಾಗೂ ಮುಲ್ಕಿಯ ಮೈಮುನಾ ಫೌಂಡೇಶನ್ ಆಶ್ರಮವಾಸಿಗಳಿಗೂ ಊಟ ನೀಡಿದ್ದಾರೆ.
ಮೇ 2ರಂದು ಬಂಟ್ವಾಳದ ಅಜಿಲಮೊಗರಿನ ಅಭಿಷೇಕ್ ಸುವರ್ಣ ಹಾಗೂ ಆತನ ಸ್ನೇಹಿತರು ಈ ಕಾರ್ಯ ಮಾಡಿದ್ದು, ಮುಂದಿನ ದಿನಗಳಲ್ಲಿ ಲಾಕ್ಡೌನ್ ಆದರೆ ಆ ಸಮಯದಲ್ಲಿ ಪ್ರತೀ ವಾರ ಈ ರೀತಿ ಊಟ ನೀಡುವ ಯೋಜನೆ ರೂಪಿಸಿದ್ದಾರೆ. ಪಿಕ್ಆಪ್ ವಾಹನದ ಮೂಲಕ ಸಸ್ಯಹಾರ ಹಾಗೂ ಮಾಂಸಾಹಾರ ಎರಡೂ ಬಗೆಯ ಆಹಾರವನ್ನೂ ನೀಡಿದ್ದಾರೆ. ಊಟದ ಜತೆಗೆ ನೀರಿನ ಬಾಟಲ್ ಹಾಗೂ ಕೋವಿಡ್ನಿಂದ ರಕ್ಷಣೆಗೆ ಮಾಸ್ಕ್ ನೀಡಿ ಅದನ್ನು ಬಳಕೆ ಮಾಡುವಂತೆಯೂ ಕಿವಿಮಾತು ಹೇಳಿದ್ದಾರೆ.