ಉಳ್ಳಾಲ:ಯುವತಿಯೋರ್ವಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿರುವ ಘಟನೆ ಕುಂಪಲ ಆಶ್ರಯ ಕಾಲೋನಿಯಲ್ಲಿ ನಡೆದಿದೆ.
20 ವರ್ಷದ ಯುವತಿ ಪ್ರೇಕ್ಷಾ ಮಂಗಳೂರಿನ ಖಾಸಗಿ ಕಾಲೆಜೊಂದರಲ್ಲಿ ಓದುತ್ತಿದ್ದು ರಜೆ ಪಡೆದುಕೊಂಡು ಮನೆಯಲ್ಲಿದ್ದಳು. ಕೆಲಸಕ್ಕೆ ಹೋಗಿದ್ದ ತಾಯಿ ಮಧ್ಯಾಹ್ನದ ವೇಳೆ ಊಟಕ್ಕೆಂದು ಮನೆಗೆ ಬಂದ ಸಂದರ್ಭ ಕೋಣೆಯೊಳಗೆ ಮಗಳು ಸಾವನ್ನಪ್ಪಿರುವುದು ಗೊತ್ತಾಗಿದೆ.