ಬೆಳ್ತಂಗಡಿ: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಅಳದಂಗಡಿ ಸಮೀಪದ ಪಿಲ್ಯ ಎಂಬಲ್ಲಿ ನಡೆದಿದೆ.
ಪಿಲ್ಯ ಸಮೀಪದ ಉಲ್ಪೆಕೆರೆ ಎಂಬಲ್ಲಿಯ ನಿವಾಸಿ ಜಯಂತ್ (31) ಎಂಬವನು ಕಳೆದ 6 ತಿಂಗಳಿನಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದನಂತೆ. ಈತ ಮನೆಯಲ್ಲಿ ಯಾರ ಜೊತೆಗೂ ಮಾತನಾಡದೆ ಮೌನವಾಗಿರುತ್ತಿದ್ದ. ಅಲ್ಲದೆ ರಾತ್ರಿ ನಿದ್ದೆ ಮಾಡದೆ ದೈವಗಳು ಕನಸಿನಲ್ಲಿ ಬರುತ್ತಿವೆ. ಹೀಗಾಗಿ ನಾನು ಸಾಯುತ್ತೇನೆ ಎಂದು ಕೂಡ ಆಗಾಗ ಹೇಳುತ್ತಿದ್ದನಂತೆ.