ಕರ್ನಾಟಕ

karnataka

ETV Bharat / state

ಡೆಂಗ್ಯೂ ಜ್ವರ: ಚಿಕಿತ್ಸೆ ಫಲಿಸದೆ ಸುಳ್ಯದ ಯುವಕ ಸಾವು - Young Man died

ಸುಳ್ಯದ ಶಾಂತಿ ನಗರ ನಿವಾಸಿ, ಮೆಸ್ಕಾಂ ಸಿಬ್ಬಂದಿ ನಾಗೇಶ ಎಂಬವರ ಪುತ್ರ ಪ್ರಮೋದ್ (21) ಡೆಂಗ್ಯೂ ಜ್ವರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ.

Sullia
ಪ್ರಮೋದ್

By

Published : Jun 13, 2021, 4:37 PM IST

ಸುಳ್ಯ/ದಕ್ಷಿಣ ಕನ್ನಡ:ಡೆಂಗ್ಯೂ ಜ್ವರದಿಂದ ಯುವಕನೋರ್ವ ಮೃತಪಟ್ಟಿದ್ದಾನೆ. ಸುಳ್ಯದ ಶಾಂತಿ ನಗರ ನಿವಾಸಿ, ಮೆಸ್ಕಾಂ ಸಿಬ್ಬಂದಿ ನಾಗೇಶ ಎಂಬವರ ಪುತ್ರ ಪ್ರಮೋದ್ (21) ಮೃತ ಯುವಕ. ಕಳೆದ 10 ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಯುವಕ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಕಳೆದ ಹತ್ತು ದಿನಗಳ ಹಿಂದೆ ಡೆಂಗ್ಯೂ ಜ್ವರ ಕಾಣಿಸಿಕೊಂಡ ಹಿನ್ನೆಲೆ ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಮೋದ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಮೋದ್ ಇಂದು ವಿಧಿವಶರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೃತರು ತಂದೆ, ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.

ABOUT THE AUTHOR

...view details