ಕರ್ನಾಟಕ

karnataka

ETV Bharat / state

ವಿದ್ಯುತ್ ಸ್ಪರ್ಶಿಸಿ ಯುವಕ ಸಾವು; ಮತ್ತೋರ್ವನ ಸ್ಥಿತಿ  ಗಂಭೀರ - Young man death

ಇಂದು ಮಧ್ಯಾಹ್ನ ವಿದ್ಯುತ್ ಸ್ಪರ್ಶಿಸಿ ಓರ್ವ ಯುವಕ ಮೃತಪಟ್ಟರೆ ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳದ ಫರಂಗಿಪೇಟೆಯ ಪೇರಿಮಾರ್ ಎಂಬಲ್ಲಿ ನಡೆದಿದೆ.

Young man death from electrical wire touch
ವಿದ್ಯುತ್ ಸ್ಪರ್ಶಿಸಿ ಓರ್ವ ಯುವನ ಸಾವು

By

Published : May 30, 2020, 8:41 PM IST

ಬಂಟ್ವಾಳ (ದ.ಕ.):ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ತಂತಿ ತಾಗಿದ್ದರಿಂದ ಒಬ್ಬ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಫರಂಗಿಪೇಟೆಯ ಪೇರಿಮಾರ್ ಎಂಬಲ್ಲಿ ನಡೆದಿದೆ.

ವೃತ್ತಿಯಲ್ಲಿ ವಿದ್ಯುತ್ ಕೆಲಸ ಮಾಡುತ್ತಿದ್ದ ಅಮ್ಮೆಮಾರ್ ನಿವಾಸಿ ಮುಬಾರಕ್ (23) ಮೃತ ವ್ಯಕ್ತಿಯಾದರೆ ಫಾರೂಕ್ ಎಂಬಾತ ಗಾಯಗೊಂಡಿದ್ದಾನೆ.

ಅಮ್ಮೆಮಾರ್ ಜಲಾಲಿಯ ನಗರದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಮುಟ್ಟಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದರು. ಇದೇ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details