ಬಂಟ್ವಾಳ:ಪಾಣೆಮಂಗಳೂರು ಸೇತುವೆಯ ಬಳಿ ಬ್ಯಾಗನ್ನಿಟ್ಟು ಯುವಕನೋರ್ವ ನದಿಗೆ ಹಾರಿದ ಘಟನೆ ಭಾನುವಾರ ನಡೆದಿದ್ದು, ಶೋಧನೆ ನಂತರ ಇಂದು (ಸೋಮವಾರ) ಸಂಜೆ ಪಾಣೆಮಂಗಳೂರು ಹೊಸ ಸೇತುವೆಯ ತಳಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.
ಪಾಣೆಮಂಗಳೂರು: ನದಿಗೆ ಹಾರಿದ ಯುವಕನ ಶವ ಪತ್ತೆ - latest crime news
ನದಿಗೆ ಹಾರಿದ ಯುವಕನೋರ್ವನ ಶವ ಪತ್ತೆಯಾಗಿದೆ. ಪಿಜಿಯಿಂದ ಬಂದ ಯುವಕ ನೇರವಾಗಿ ನದಿಗೆ ಬಂದು ಬ್ಯಾಗ್ಅನ್ನು ಅಲ್ಲೇ ಇರಿಸಿ ನೀರಿಗೆ ಜಿಗಿದಿದ್ದನು. ನದಿಗೆ ಹಾರುತ್ತಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಒಂದು ದಿನ ಶೋಧನೆ ಮಾಡಿದ ಬಳಿಕ ಶವ ಪತ್ತೆಯಾಗಿದೆ.
![ಪಾಣೆಮಂಗಳೂರು: ನದಿಗೆ ಹಾರಿದ ಯುವಕನ ಶವ ಪತ್ತೆ young man dead body found who jumped into a river](https://etvbharatimages.akamaized.net/etvbharat/prod-images/768-512-9490178-165-9490178-1604929557881.jpg)
ನದಿಗೆ ಹಾರಿದ ಯುವಕ ಪುತ್ತೂರು ತಾಲೂಕಿನ ಬಲ್ನಾಡು ಕಾಂತಿಲ ನಿವಾಸಿ ಸುಚೇತನ್ (27) ಎಂದು ತಿಳಿದುಬಂದಿದ್ದು, ಈತನ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಸುಚೇತನ್ ಭಾನುವಾರ ಮಂಗಳೂರಿನ ಪಿಜಿಯಿಂದ ಬಂದು ಬೆಳಗ್ಗೆ ಪಾಣೆಮಂಗಳೂರು ಹೊಸ ಸೇತುವೆಯ ಬಳಿ ತನ್ನ ಬ್ಯಾಗ್ ಇರಿಸಿ ನದಿಗೆ ಹಾರಿದ್ದು, ಯಾರೋ ಅದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬ್ಯಾಗಿನಲ್ಲಿ ಸಿಕ್ಕ ಆಧಾರ್ ಕಾರ್ಡ್, ವೋಟರ್ ಐಡಿ ಆಧಾರದ ಮೇರೆಗೆ ಇದೇ ಯುವಕ ನದಿಗೆ ಹಾರಿದ್ದಾನೆ ಎಂದು ಸಂಶಯಿಸಿ ಮನೆಗೆ ಮಾಹಿತಿ ನೀಡಲಾಗಿತ್ತು. ಮನೆಯವರು ಕೂಡ ಆಗಮಿಸಿದ್ದರು. ಬಳಿಕ ರಾತ್ರಿವರೆಗೂ ಬಂಟ್ವಾಳದ ಅಗ್ನಿಶಾಮಕ ದಳ, ಸ್ಥಳೀಯ ಈಜುಗಾರರು ಬೋಟಿನ ಮೂಲಕ ಸಂಜೆಯವರೆಗೂ ಹುಡುಕಾಡಿದರೂ, ಯುವಕನ ಶವ ಪತ್ತೆಯಾಗಿರಲಿಲ್ಲ. ಸೋಮವಾರ ಕೂಡ ಹುಡುಕಾಟ ಮುಂದುವರಿಸಿದ್ದು, ಯುವಕನ ಮೃತದೇಹ ಪಾಣೆಮಂಗಳೂರು ಹೊಸ ಸೇತುವೆ ತಳಭಾಗದಲ್ಲಿ ಸಿಕ್ಕಿದೆ.