ಬಂಟ್ವಾಳ: ಕಲ್ಲಡ್ಕದ ಕೊಳಕೀರು ನಿವಾಸಿ ನಿಶಾಂತ್ ಇಂದು ಬೆಳಗ್ಗೆ ಪಾಣೆಮಂಗಳೂರಿನಲ್ಲಿರುವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನೇತ್ರಾವತಿ ನದಿಗೆ ಹಾರಿದ ಯುವಕ... ರಕ್ಷಣೆಗೆ ಸ್ಥಳೀಯರ ಹರಸಾಹಸ - ವಿಡಿಯೋ ವೈರಲ್ - ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ
ಕಲ್ಲಡ್ಕದ ಕೊಳಕೀರು ನಿವಾಸಿ ನಿಶಾಂತ್ ಪಾಣೆಮಂಗಳೂರಿನಲ್ಲಿರುವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕ ನದಿಗೆ ಹಾರಿದ ಸಂದರ್ಭ ಸ್ಥಳೀಯರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ನದಿಗೆ ಹಾರಿ ಆತನನ್ನು ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈತ ಸೇತುವೆಯಿಂದ ಕೆಳಕ್ಕೆ ಹಾರಿದ ಸಂದರ್ಭ ಅಲ್ಲೇ ಇದ್ದ ಗೂಡಿನಬಳಿಯ ಶಮೀರ್ ಮುಹಮ್ಮದ್, ತೌಸೀಫ್, ಝಾಹಿದ್, ಜಾಯಿದ್, ಅಕ್ಕರಂಗಡಿಯ ಮುಕ್ತಾರ್, ಆರಿಫ್ ಸೇರಿದಂತೆ ಮತ್ತಿತರರು ನದಿಗೆ ಹಾರಿ ಆತನನ್ನು ಮೇಲಕ್ಕೆತ್ತಿದರು. ಕೂಡಲೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ದುರಾದೃಷ್ಟವಶಾತ್ ಆತ ಬದುಕುಳಿಯಲಿಲ್ಲ.
ಸದ್ಯ ನಗರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಕ ನದಿಗೆ ಹಾರಿದ ಸಂದರ್ಭ ಸ್ಥಳೀಯರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ನದಿಗೆ ಹಾರಿ ಯುವಕನನ್ನು ಮೇಲಕ್ಕೆತ್ತಿದ್ದರು. ಬಳಿಕ ಪ್ರಥಮ ಚಿಕಿತ್ಸೆ ನೀಡುತ್ತಿರುವ ಯುವಕರ ಸಾಹಸದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.