ಮಂಗಳೂರು:ನಗರದ ಲಾಲ್ ಬಾಗ್ನಲ್ಲಿರುವ ಪಬ್ಬಾಸ್ ಸಮೀಪ ಯುವಕನ ಮೇಲೆ ಆರು ಮಂದಿ ಅಪರಿಚಿತರು ಹಲ್ಲೆಗೈದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಸ್ಥಳೀಯ ನಿವಾಸಿ ದೀಪಕ್ ಹಲ್ಲೆಗೊಳಗಾದ ಯುವಕ. ರಾತ್ರಿ 9.45ರ ಸುಮಾರಿಗೆ ಎರಡು ಬೈಕ್‌ಗಳಲ್ಲಿ ಬಂದ ಆರು ಮಂದಿ ದುಷ್ಕರ್ಮಿಗಳು ಏಕಾಏಕಿ ಯುವಕನ ಜೊತೆ ವಾಗ್ವಾದಕ್ಕಿಳಿದು, ನಂತರ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಲ್ಲೆಗೈದು ಪರಾರಿಯಾಗಿದ್ದಾರೆ.
ಮಂಗಳೂರು: ಯುವಕನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ - miscreants attacks man in manglore
ಮಂಗಳೂರಿನ ಪಬ್ಬಾಸ್ ಸಮೀಪ ಆರು ಜನ ದುಷ್ಕರ್ಮಿಗಳು ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಪರಾರಿ ಆಗಿದ್ದಾರೆ.
ಮಾರಣಾಂತಿಕ ಹಲ್ಲೆ
ಹಲ್ಲೆಯಿಂದ ಆತನ ಎಡಗೈಗೆ ಎರಡು ಇಂಚು ಆಳದವರೆಗೆ ಗಾಯವಾಗಿದೆ. ಗಾಯಾಳುವನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.