ಕರ್ನಾಟಕ

karnataka

ETV Bharat / state

ಭೇಟಿಗೆ ಕರೆದು ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಪುತ್ತೂರಲ್ಲಿ ಯುವಕ ಅರೆಸ್ಟ್​ - ಪುತ್ತೂರು ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ

ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪುತ್ತೂರು ಮಹಿಳಾ ಠಾಣೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

young-man-arrested-in-college-student-harassment-case
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

By

Published : Mar 5, 2022, 7:40 PM IST

ಪುತ್ತೂರು(ದಕ್ಷಿಣ ಕನ್ನಡ):ಇಲ್ಲಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಗೆ ಸಂಘಟನೆಯೊಂದರ ಮುಖಂಡ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿರುಕುಳಕ್ಕೆ ಒಳಗಾದ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದು, ಆರೋಪಿಯನ್ನು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.

ಸುಳ್ಯ ಐವರ್ನಾಡು ಗ್ರಾಮದ ರಕ್ಷಿತ್‌ ಎಂಬಾತನೆ ಬಂಧಿತ ಆರೋಪಿ. ಈತ ಸಂಘಟನೆಯೊಂದರ ಸಂಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿದು ಬಂದಿದೆ. ವಿದ್ಯಾರ್ಥಿನಿಯು ಪುತ್ತೂರಿನ ಹಾಸ್ಟೆಲ್​ನಲ್ಲಿ ಇದ್ದುಕೊಂಡು ಶಿಕ್ಷಣ ಪಡೆಯುತ್ತಿದ್ದಳು.

ರಕ್ಷಿತ್‌ ಈ ಬಾಲಕಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರ ಬಾಲಕಿಯ ಮನೆಯವರಿಗೆ ತಿಳಿದು, ರಕ್ಷಿತ್​ನನ್ನು ಕರೆದು ಬುದ್ಧಿವಾದ ಹೇಳಿದ್ದರು. ಇದೇ ವಿಚಾರವಾಗಿ ಬಾಲಕಿಯ ತಂದೆ, ಸಹೋದರ ಹಾಗೂ ಆರೋಪಿಯ ಮಧ್ಯೆ ಎರಡು ತಿಂಗಳ ಹಿಂದೆ ಗಲಾಟೆಯಾಗಿ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು. ಆ ಸಂದರ್ಭ ಬಾಲಕಿಯ ತಂದೆ ನೀಡಿದ ದೂರಿನಂತೆ ಆರೋಪಿ ರಕ್ಷಿತ್‌ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆದರೆ ಆ ಬಳಿಕವೂ ರಕ್ಷಿತ್ ಬಾಲಕಿ ವಾಸ್ತವ್ಯ ಹೂಡಿದ್ದ ಪುತ್ತೂರಿನ ಹಾಸ್ಟೆಲ್ ವಾರ್ಡನ್​ಗೆ ಕರೆ ಮಾಡಿ ತಾನು ಬಾಲಕಿಯ ಅಣ್ಣನೆಂದು ಸುಳ್ಳು ಹೇಳಿ ಆಕೆಗೆ ಫೋನ್‌ ನೀಡಲು ತಿಳಿಸುತ್ತಿದ್ದ. ಈ ವೇಳೆ ಬಾಲಕಿ ಬಳಿ ಹೊರಗಡೆ ಎಲ್ಲಾದರೂ ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದ. ಅಲ್ಲದೆ, ಬಾಲಕಿ ಬರಲು ನಿರಾಕರಿಸಿದಾಗ ಕೊಲ್ಲುವ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ:ಆಸ್ಪತ್ರೆಯಲ್ಲಿದ್ದಾಗಲೇ ಯುವಕನಿಗೆ ಹೃದಯಾಘಾತ.. ಸ್ಥಳದಲ್ಲೇ ಚಿಕಿತ್ಸೆ ನೀಡಿ, ಜೀವ ಉಳಿಸಿದ ವೈದ್ಯರು

ಆರೋಪಿಯ ಜೀವ ಬೆದರಿಕೆಯಿಂದ ಹೆದರಿದ ಬಾಲಕಿಯೂ ಫೆ. 27ರಂದು ಪುತ್ತೂರಿನ ಯಾತ್ರಿ ಸ್ಥಳ ಬೀರುಮಲೆಗುಡ್ಡೆಗೆ ಬರುವುದಾಗಿ ತಿಳಿಸಿದ್ದಾಳೆ. ಅಲ್ಲಿಗೆ ಆಕೆ ತೆರಳಿದ ಸಂದರ್ಭ ಆರೋಪಿ ಆಕೆಯನ್ನು ಬಲವಂತವಾಗಿ ಅಪ್ಪಿಕೊಂಡು ಮುತ್ತಿಕ್ಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗ್ತಿದೆ. ಕೂಡಲೇ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಹಾಸ್ಟೆಲ್​ಗೆ ಬಂದಿದ್ದಾಳೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಬಗ್ಗೆ ಬಂದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪುತ್ತೂರು ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈತನ ವಿರುದ್ಧ ಐಪಿಸಿ ಕಲಂ 354 A, 506 ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details