ದಕ್ಷಿಣ ಕನ್ನಡ: ಮರದ ಕೊಂಬೆಯನ್ನು ಕಡಿದು ಮರ ಉರುಳಿಸುತ್ತಿದ್ದ ಯುವಕನೋರ್ವ ಹಗ್ಗದಲ್ಲಿ ಸಿಲುಕಿ ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಸಮೀಪದ ನೂಚಿಲ ಎಂಬಲ್ಲಿ ನಡೆದಿದೆ.
ಮರದ ಕೊಂಬೆ ಕಡಿಯುತ್ತಿದ್ದ ಯುವಕ ಹಗ್ಗದಲ್ಲಿ ಸಿಲುಕಿ ಸಾವು - ದಕ್ಷಿಣ ಕನ್ನಡ ಕ್ರೈಂ ನ್ಯೂಸ್
ಮರದ ಕೊಂಬೆಯನ್ನು ಕಡಿದು ಮರ ಉರುಳಿಸುತ್ತಿದ್ದ ಯುವಕನೋರ್ವ ಹಗ್ಗದಲ್ಲಿ ಸಿಲುಕಿ ಮೃತಪಟ್ಟ ದಾರುಣ ಘಟನೆ ಸುಬ್ರಹ್ಮಣ್ಯ ಸಮೀಪದ ನೂಚಿಲ ಎಂಬಲ್ಲಿ ನಡೆದಿದೆ.

ಸುನೀಲ್ ಅರಂಪಾಡಿ ಮೃತ ಯುವಕ
ಮರದ ಕೊಂಬೆ ಕಡಿಯುತ್ತಿದ್ದ ಯುವಕ ಹಗ್ಗಕ್ಕೆ ಸಿಲುಕಿ ಸಾವು
ಏನೆಕಲ್ ಸಮೀಪದ ಆರಂಪಾಡಿಯ ಪೂವಪ್ಪಗೌಡರ ಪುತ್ರ ಸುನೀಲ್ ಅರಂಪಾಡಿ ಮೃತ ಯುವಕ. ಮರದ ಕೊಂಬೆ ಕಡಿಯುತ್ತಿದ್ದ ಸುನೀಲ್ ಹಗ್ಗ ಸಹಿತ ಮರಕ್ಕೆ ಸಿಕ್ಕಿಹಾಕಿಕೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯರ ಸಹಾಯದಿಂದ ಮರದಿಂದ ಮೃತದೇಹವನ್ನು ಕೆಳಗಡೆ ಇಳಿಸಲಾಯಿತು. ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.