ಕರ್ನಾಟಕ

karnataka

ETV Bharat / state

ತಂದೆ ಚಲಾಯಿಸುತ್ತಿದ ಲಾರಿಯಡಿ ಸಿಲುಕಿ ಬಾಲಕ ದಾರುಣ ಸಾವು - ಮೂಡಬಿದ್ರೆ ಅಪರಾಧ ಸುದ್ದಿ

ತಂದೆ ಚಲಾಯಿಸುತಿದ್ದ ಲಾರಿಯಡಿಗೆ ಬಾಲಕ ಸಿಲುಕಿ ಅಸುನೀಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ.

moodabidri
ಬಾಲಕ ದಾರುಣ ಸಾವು

By

Published : Mar 11, 2021, 10:37 AM IST

ಬೆಳ್ತಂಗಡಿ: ತಂದೆ ಚಲಾಯಿಸುತಿದ್ದ ಲಾರಿಯಡಿಗೆ ಆಕಸ್ಮಿಕವಾಗಿ ಸಿಲುಕಿ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಮೂಡಬಿದ್ರೆಯಲ್ಲಿ ನಡೆದಿದೆ.

ಉಜಿರೆ ಸಮೀಪದ ಅತ್ತಾಜೆ‌ ನಿವಾಸಿ ಇಬ್ರಾಹಿಂ ಇಬ್ಬಿ ಎಂಬವರ ಪುತ್ರ ಉಜಿರೆ ಹಳೆಪೇಟೆ ಬದ್ರುಲ್ ಹುದಾ ಮದರಸದ‌ ಮೂರನೇ ತರಗತಿ ವಿದ್ಯಾರ್ಥಿ ಮುರ್ಷಿದ್ (9) ಮೃತ ಬಾಲಕ.

ಉಜಿರೆ ಅತ್ತಾಜೆ ಇಬ್ರಾಹಿಂ ಮತ್ತು ರಹಿಮತ್ ದಂಪತಿಯ ಇಬ್ಬರು ಮಕ್ಕಳಲ್ಲಿ‌ ಮೊದಲನೆಯವನಾಗಿದ್ದ ಬಾಲಕ ಮುರ್ಷಿದ್ ತನ್ನ ತಂದೆಯ ಜೊತೆಗೆ ಮೂಡಬಿದ್ರೆಯ ಕಲ್ಲಿನ‌ಕೋರೆಗೆ ಹೋಗುವಾಗ ಬಾಲಕನೂ ಜೊತೆಗೆ ತೆರಳಿದ್ದನೆಂದು ಹೇಳಲಾಗಿದೆ.

ತಂದೆಯೇ ಚಾಲಕನಾಗಿ ಲಾರಿ ಚಲಾಯಿಸಿದ ವೇಳೆ ಬಾಲಕ ಆಕಸ್ಮಿಕವಾಗಿ ಅದರ ಚಕ್ರದಡಿ ಸಿಲುಕಿದ್ದಾನೆ. ತಕ್ಷಣ ಮೂಡಬಿದ್ರೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಬಾಲಕ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ನಂತರ ಅಲ್ಲೇ ಮರಣೊತ್ತರ ಪರೀಕ್ಷೆ ನಡೆಸಿ ಉಜಿರೆ ಮಸೀದಿಯ ದಫನ್​‌ ಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ABOUT THE AUTHOR

...view details