ಮಂಗಳೂರು(ದಕ್ಷಿಣ ಕನ್ನಡ):ಇಂದು ದೇಶಾದ್ಯಂತ ಕೋಟ್ಯಂತರ ಮಂದಿ ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಮಂಗಳೂರಿನಲ್ಲೋರ್ವರು ನದಿಯಲ್ಲಿ ಯೋಗ ಮಾಡುವ ಮೂಲಕ ಗಮನ ಸೆಳೆದರು. ವೇವ್ ಸರ್ಫ್ ಸ್ಕೂಲ್ ಆ್ಯಂಡ್ ಕೆಫೆ ಮಾಲೀಕ ಅನೀಶ್ ಪಣಂಬೂರು ಅವರು ತಣ್ಣೀರುಬಾವಿ ಬೀಚ್ ಮುಂಭಾಗದಲ್ಲಿರುವ ಫಲ್ಗುಣಿ ನದಿಯಲ್ಲಿ ಸ್ಟ್ಯಾಂಡ್ ಅಪ್ ಪೆಡಲ್ ಮೇಲೆ ನಿಂತು ಯೋಗಾಸನ ಭಂಗಿ ಪ್ರದರ್ಶಿಸಿದರು.
ಮಂಗಳೂರು: ನದಿಯಲ್ಲಿ ಸ್ಟ್ಯಾಂಡ್ ಅಪ್ ಪೆಡಲ್ ಮೇಲೆ ನಿಂತು ಯೋಗಾಸನ - yoga day 2022
ವೇವ್ ಸರ್ಫ್ ಸ್ಕೂಲ್ ಆ್ಯಂಡ್ ಕೆಫೆ ಮಾಲೀಕ ಅನೀಶ್ ಪಣಂಬೂರು ಅವರು ತಣ್ಣೀರುಬಾವಿ ಬೀಚ್ ಮುಂಭಾಗದಲ್ಲಿರುವ ಫಲ್ಗುಣಿ ನದಿಯಲ್ಲಿ ಸ್ಟ್ಯಾಂಡ್ ಅಪ್ ಪೆಡಲ್ ಮೇಲೆ ನಿಂತು ಯೋಗ ಮಾಡಿ ಗಮನ ಸೆಳೆದರು.
ನದಿ ಮೇಲೆ ವ್ಯಕ್ತಿಯ ಯೋಗ ಪ್ರದರ್ಶನ
ಅನೀಶ್ ಪಣಂಬೂರು ವಿಶಿಷ್ಟ ರೀತಿಯಲ್ಲಿ ಯೋಗ ಮಾಡುತ್ತಾರೆ. ಸಮುದ್ರ ಹಾಗೂ ನದಿಯಲ್ಲಿ ಯೋಗ ಮಾಡುವ ಇವರು ಇಂದು ಸಮುದ್ರದಲೆಗಳ ಅಬ್ಬರ ಜೋರಾಗಿದ್ದ ಕಾರಣ ನದಿಯಲ್ಲಿ ಯೋಗ ಮಾಡಿದರು. ಸ್ಟ್ಯಾಂಡ್ ಅಪ್ ಪೆಡಲ್‌ನಲ್ಲಿ ನಿಂತು ಯೋಗ, ಸೂರ್ಯ ನಮಸ್ಕಾರ ಸೇರಿ ವಿವಿಧ ಯೋಗ ಭಂಗಿಯನ್ನು ಮಾಡಿದ್ದಾರೆ.
ಇದನ್ನೂ ಓದಿ:ನೀರಿನಲ್ಲಿ ಸರ್ವಾಂಗಾಸನ, ಕಾಲಿಂದಲೇ ಬಿಡ್ತಾರೆ ಬಾಣ.. ಹಾಸನದಲ್ಲೋರ್ವ ವಿಶಿಷ್ಟ ಯೋಗಪಟು